ಡಿಸೆಂಬರ್ 18: “ಸಹಕಾರ ರತ್ನ” ಯಶ್‍ಪಾಲ್ ಎ. ಸುವರ್ಣರಿಗೆ ಅಭಿನಂದನಾ ಕಾರ್ಯಕ್ರಮ

Spread the love

ಡಿಸೆಂಬರ್ 18: “ಸಹಕಾರ ರತ್ನ” ಯಶ್‍ಪಾಲ್ ಎ. ಸುವರ್ಣರಿಗೆ ಅಭಿನಂದನಾ ಕಾರ್ಯಕ್ರಮ

69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಹಕಾರ ಕ್ಷೇತ್ರದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರದ ಸಹಕಾರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ವತಿಯಿಂದ 2022ನೇ ಸಾಲಿನ ಸಹಕಾರ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾದ ಯುವ ನಾಯಕ, ಧಾರ್ಮಿಕ, ಸಾಮಾಜಿಕ ಮುಂದಾಳು

ಯಶ್‍ಪಾಲ್ ಎ. ಸುವರ್ಣ ರವರಿಗೆ ಡಿಸೆಂಬರ್ 18 ಆದಿತ್ಯವಾರ ಸಂಜೆ 6.30ಕ್ಕೆ ಹಿರಿಯಡ್ಕದ ಸೋಹನ್ ರಾಯಲ್ ಹಾಲ್‍ನಲ್ಲಿ ಸಹಕಾರ ರತ್ನ ಯಶ್‍ಪಾಲ್ ಸುವರ್ಣ ಅಭಿನಂದನಾ ಸಮಿತಿ ಸಮಿತಿಯ ವತಿಯಿಂದ ಆಯೋಜಿಸಿರುÀವುದಾಗಿ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಹಿರೇಬೆಟ್ಟು ಹಾಗೂ ಸಂಚಾಲಕರಾದ ಶೇಖರ್ ಶೆಟ್ಟಿ ಹಿರಿಯಡ್ಕ ತಿಳಿಸಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಶ್ರೀ ವಜ್ರದೇಹಿ ಮಠ ಗುರುಪುರ ಮಂಗಳೂರು ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಯವರು ನೆರವೇರಿಸಿ ಆಶೀರ್ವಚಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಸುರೇಶ್ ನಾಯಕ್ ಕುಯಿಲಾಡಿ, ಮಣಿಪಾಲ ಶ್ರೀ ವೈಷ್ಣವಿ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಜಯರಾಜ್ ಹೆಗ್ಡೆ, ಹಿರಿಯಡ್ಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಅಮರನಾಥ ಶೆಟ್ಟಿ, ಹೆಬ್ರಿ ಕೋಮಲ್ ಫೀಡ್ಸ್‍ನ ಆಡಳಿತ ನಿರ್ದೇಶಕರಾದ ಸಿದ್ಧಿ ಪ್ರಸಾದ್ ಎಂ. ಶೆಣೈ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love