ಡಿ.13 :ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ ವಾರ್ಷಿಕ ಸಮಾವೇಶ  

Spread the love

ಡಿ.13 :ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ ವಾರ್ಷಿಕ ಸಮಾವೇಶ  

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ (ರಿ) ದ ವಾರ್ಷಿಕ ಸಮಾವೇಶ ಮತ್ತು ಸಮಾಜದಲ್ಲಿ ಸಾಧನೆ ಗೈದವರಿಗೆ ಸನ್ಮಾನವನ್ನು ಡಿಸೆಂಬರ್ 13 ರಂದು ಕೊಡಿಯಾಲ್‍ಬೈಲ್ ಬಿಷಪರ ನಿವಾಸದ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಇದರ ಉದ್ಘಾಟನೆಯನ್ನು ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ (ಧರ್ಮಧ್ಯಕ್ಷರು ಮಂಗ್ಳುರ್ ಧರ್ಮಪ್ರಾಂತ್ಯ) ನೆರವೇರಿಸರಿರುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪಾವ್ಲ್ ರೋಲ್ಫಿ ಡಿಕೋಸ್ತಾ ಅಧ್ಯಕ್ಷರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ(ರಿ) ಮುಖ್ಯ ಅತಿಥಿಗಳಾಗಿ ಅತೀ ವಂದನೀಯ ಮ್ಯಾಥ್ಯು ವಾಸ್(ಆತ್ಮಿಕ ನಿರ್ದೇಶಕರು),  ಆ್ಯಂಟನಿ ಮರಿಯಪ್ಪ( IFS- D.F.O Bangalore Rural Disrict ), ಜೊಯ್ಲಸ್ ಡಿಸೋಜ(ಅಧ್ಯಕ್ಷರು, ಕ್ರೈಸ್ತ ಅಭಿವೃದ್ಧಿ ಸಮಿತಿ ಕರ್ನಾಟಕ್ ಸರ್ಕಾರ),  ಮಾರ್ಸೆಲ್ ಮೊಂತೇರೊ(ಕರ್ನಾಟಕ್ ಸರ್ಕಾರದ ಯೋಜನ ಆಯೋಗದ ಸದಸ್ಯರು),  ರೋಯ್ ಕ್ಯಾಸ್ಟಲಿನೊ(ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗ್ಳುರ್ ಧರ್ಮಪ್ರಾಂತ್ಯ),   ವಾಲ್ಟರ್ ಡಿಸೋಜ(Ex- Chairman of Export Promotion Council of India),  ಲ್ಯಾನ್ಸಿ ಡಿಕುನ್ಹಾ(ರಾಷ್ರೀಯ ಅಧ್ಯಕ್ಷರು,A.I.C.U) ವೇದಿಕೆಯಲ್ಲಿ ಉಪಸ್ಥಿತರಿರುವರು.


Spread the love