ಡಿ 18: ಸಂತ ಮದರ್ ತೆರೇಸಾ ವಿಚಾರ ವೇದಿಕೆ  ವತಿಯಿಂದ ಸೌಹಾರ್ದ ಕ್ರಿಸ್ಮಸ್ ಸಂಭ್ರಮ-2022

Spread the love

ಡಿ 18: ಸಂತ ಮದರ್ ತೆರೇಸಾ ವಿಚಾರ ವೇದಿಕೆ  ವತಿಯಿಂದ ಸೌಹಾರ್ದ ಕ್ರಿಸ್ಮಸ್ ಸಂಭ್ರಮ-2022

ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇವರ ವತಿಯಿಂದ ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ( ರಿ) ಮತ್ತು ಸಂತ ಆಲೋಶಿಯಸ್ ಕಾಲೇಜು ಮಂಗಳೂರು ಹಾಗೂ ಸಾಮರಸ್ಯ ಇವರ ಸಹಕಾರದೊಂದಿಗೆ ತಾರೀಕು18-12-2022 ರಂದು ಅದಿತ್ಯವಾರ ಸಂಜೆ 5.00ಗಂಟೆಗೆ ಬಾವುಟ ಗುಡ್ಡೆ ಆಲೋಶಿಯಸ್ ಕಾಲೇಜಿನ ಮದರ್ ತೆರೇಸಾ ಪೀಸ್ ಪಾರ್ಕ್ ನಲ್ಲಿ ಕ್ರಿಸ್ಮಸ್ ಹಬ್ಬದ ಅಚರಣೆಯು ನಡೆಯಲಿರುವುದು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಕಥೋಲಿಕ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಡಾ! ಲಾರೆನ್ಸ್ ಮುಕ್ಕುಜಿ ಉದ್ಘಾಟಿಸಲಿದು ಯೇನೋಪಯ ವಿಶ್ವ ವಿದ್ಯಾಲಯದ ಕುಲಸಚಿವರು ಯೆನೆಪೋಯ ಅಬ್ದುಲ್ ಕುಂಞ, ಬ್ರಹ್ಮ ಕುಮಾರಿ ಸಮಾಜ ಮಂಗಳೂರು ಮುಖ್ಯಸ್ಥರಾದ ಬ್ರಹ್ಮ ಕುಮಾರಿ ವಿಶ್ವೇಶರಿ, ಎಸ್. ವೈ. ಎಸ್ ಜಿಲ್ಲಾಧ್ಯಕ್ಷರಾದ ಮೌಲಾನಾ ಯು. ಕೆ. ಅಬ್ದುಲ್ ಅಜೀಜ್ ದಾರಿಮಿ , ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಸಹ ಸಂಸ್ಥಾಪಕರಾದ ಡಾ! ಉಷಾ ಪ್ರಭಾ ಎನ್. ನಾಯಕ್, ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂದನೀಯ ಮೆಲ್ವಿನ್ ಜೋಸೆಫ್ ಪಿಂಟೊ. SJ ಮುಖ್ಯ ಅತಿಥಿಗಳಾಗಿ ಪಾಲ್ಗೊಳಲಿರುವರು .

ಮಧ್ಯಾಹ್ನ 2.ರಿಂದ ಸಂಜೆ 5.00ರ ತನಕ ಕ್ಯಾರಲ್ ಹಾಡು, ನಕ್ಷತ್ರ, ಹಾಗೂ ಕೇಕ್ ಪ್ರದರ್ಶನ ಸ್ಪರ್ಧೆಗಳು ನಡೆಯಲಿದ್ದು ಮತ್ತು ಮಾಂಡ್ ಸೊಭಾಣ್ ಸಂಸ್ಥೆಯಿಂದ ಕ್ರಿಸ್ ಮಸ್ ಆಟಗಳ ಕಾರ್ಯಕ್ರಮ ನಡೆಯಲಿದೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಮಾಧ್ಯಮ ಪ್ರತಿನಿಧಿ ಸುಶೀಲ್ ನೊರೊನ್ಹಾ ತಿಳಿಸಿದಾರೆ


Spread the love