ಡಿ. 5-26: ಈಶಪ್ರಿಯ ತೀರ್ಥ ಸ್ವಾಮೀಜಿಯವರ ಪರ್ಯಾಯವಧಿಯ ದೀಕ್ಷಾ ಸಮಾಪನದ ವಿಶ್ವಾರ್ಪಣಮ್‌ ಉತ್ಸವ

Spread the love

ಡಿ. 5-26: ಈಶಪ್ರಿಯ ತೀರ್ಥ ಸ್ವಾಮೀಜಿಯವರ ಪರ್ಯಾಯವಧಿಯ ದೀಕ್ಷಾ ಸಮಾಪನದ ವಿಶ್ವಾರ್ಪಣಮ್‌ ಉತ್ಸವ

ಉಡುಪಿ:  ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರ ಪ್ರಥಮ ಪ್ರರ್ಯಾಯವಧೀಯ ದೀಕ್ಷಾ ಸಮಾಪನದ ವಿಶ್ವಾರ್ಪಣಮ್‌ ಉತ್ಸವವು ಡಿಸೆಂಬರ್‌ 05 ರಿಂದ 26 ರ ವರೆಗೆ ನಡೆಯಲಿದ್ದು ವೇಳೆ ರಾಜ್ಯ ಮತ್ತು ದೇಶದ ವಿವಿಧ ಚಿಂತಕರು, ಕಲಾವಿದರು ಕಾರ್ಯಕ್ರಮವನ್ನು ನೀಡಲಿದ್ದಾರೆ ಎಂದು ಮಠದ ವ್ಯವಸ್ಥಾಪಕರಾದ ಗೋವಿಂದಾಚಾರ್ಯ ಅವರು ಹೇಳಿದರು. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.

ಡಿಸೆಂಬರ್‌ 5 ರಂದು ಸಂಜೆ 4 ಗಂಟೆಗೆ ವಿಶ್ವಾರ್ಪಣ್‌ ಕಾರ್ಯಕ್ರಮದ ಉದ್ಘಾಣೆಯನ್ನು ಅದಮಾರು ಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನೆರವೇರಿಸಲಿದ್ದು, ವಿಧ್ವತ್‌ ಕ್ಷೇತ್ರದಲ್ಲಿ ಸಾಧನೆ ತೋರಿದ ವಿ| ಶ್ರೀನಿವಾಸ ಆಚಾರ್ಯ ಕರ್ನೂಲು, ಶೈಕ್ಷಣಿಕ ಕ್ಷೇತ್ರದಲ್ಲಿ ಪೂರ್ಣಮತಿ ವಿದ್ಯಾಲಯ ಬೆಂಗಳೂರು ಹಾಗು ಮಠದಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು.

ಡಿಸೆಂಬರ್‌ 6 ರಂದು ಹಿಂದೂ ಅಸ್ಮಿತೆ ಕುರಿತಾಗಿ ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ವಿಶೇಷ ಉಪನ್ಯಾಸ ನೀಡಲಿದ್ದು, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಪಂ|ಪೂರ್ಬಯನ್‌ ಚಟರ್ಜಿ ಮುಂಬೈ ಮತ್ತು ವಿ|ಅಂಬಿ ಸುಬ್ರಹ್ಮಣ್ಯನ್‌ ಬೆಂಗಳೂರು ಇವರಿಂದ ಸಿತಾರ್‌ ಮತ್ತು ಪಿಟೀಲು ಜುಗಲ್‌ ಬಂದಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಡಿಸೆಂಬರ್‌ 7 ರಂದು ಶಿಕ್ಷಣ ವಿಮರ್ಶೆ ಮತ್ತು ಮಕ್ಕಳಿಗೆ ಎಂತಹ ಶಿಕ್ಷಣ ಬೇಕು ಎಂಬ ಕುರಿತು ಅಂಕಣಕಾರ ರೋಹಿತ್‌ ಚಕ್ರತೀರ್ಥ ಉಪನ್ಯಾಸನೀಡಲಿದ್ದು ಆರ್ಯ ಈಡಿಗ ಮಹಾಸಂಸ್ಥಾನ ಸೋಲುರು ಇದರ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಕಟೀಲು ದುರ್ಗ ಮಕ್ಕಳ ಮೇಳ ಇದರ ವತಿಯಿಂದ ನರಕಾಸುರ ವಧೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್‌ 8 ರಂದು ಕೇಂದ್ರದ ಮಾಜಿ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್‌ ಸ್ವಾಮಿ ಇವರಿಂದ Be proud to be a part of the Great Ancient Hindu Civilisation the only ancient civilisation still existing ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದು, ಕಾಸರಗೋಡಿನ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿಲಿದ್ದು ಸಾಂಸ್ಕೃತಿಕ ಕಾರ್ಯಕ್ರಮ ಡಾ|ಮೈಸೂರು ಮಂಜುನಾಥ ಮತ್ತು ಪಂ|ಜಯತೀರ್ಥ ಮೇವುಂಡಿ ಇವರಿಂದ ವಿಶೇಷ ಪೀಟೀಲು ಮತ್ತು ಸಂಗೀತ ಜುಗಲ್‌ ಬಂದಿ ನಡೆಯಲಿದೆ.

ಡಿಸೆಂಬರ್‌ 9 ರಂದು ಸುಬ್ರಹ್ಮಣ್ಯ ಷಷ್ಠಿ ವಿಚಾರದಲ್ಲಿ ಡಾ|ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ ಇವರಿಂದ ವಿಶೇಷ ಉಪನ್ಯಾಸ ನಡೆಯಲಿದ್ದು ಮೂಡಬಿದರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಇದರ ವತಿಯಿಂದ ಅಕ್ಷಯಾಂಬರ ವಿಲಾಸ ಯಕ್ಷಗಾನ ಜರುಗಲಿದೆ.

ಡಿಸೆಂಬರ್‌ 10 ರಂದು ಯಕ್ಷಗಾನ ಪ್ರಸಂಗಕರ್ತರಾದ ಪ್ರೋ. ಪವನ್‌ ಕಿರಣಕೆರೆ ಇವರಿಂದ ಜೈಮಿನಿ ಭಾರತದ ಕಾವ್ಯಾಂಶ ಮತ್ತು ವ್ಯಾಸಭಾರತದ ಒಂದು ಅವಲೋಕನ ವಿಚಾರದಲ್ಲಿ ಉಪನ್ಯಾಸ ನೀಡಲಿದ್ದು, ಒಡಿಯೂರು ಗುರುದೇವಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪಂ|ರೋಣು ಮುಜುಮ್ದಾರ್‌, ಮತ್ತು ವಿ|ಹೆಚ್‌ ಕೆ ವೆಂಕಟರಾಮ್‌ ಅವರಿಂದ ಬಾನ್ಸುರಿ – ಪಿಟೀಲು ಜುಗಲ್‌ ಬಂದಿ ನಡೆಯಲಿದೆ.

ಡಿಸೆಂಬರ್‌ 11 ರಂದು ರಾಷ್ಟ್ರೀಯ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇದರ ಉದ್ಘಾನೆ ನಡೆಯಲಿದ್ದು, ಕಟಪಾಡಿ ಆನೆಗುಂದಿ ಮಠದ ಕಾಳಹಸ್ತೇಂದ್ರ ಸರಸ್ವತಿ ಸಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಪತ್ರಕರ್ತರಾದ ರಂಗನಾಥ್‌ ಭಾರಧ್ವಾಜ್‌ ಅವರು ಭಾರತೀಯರಾಗಿ ನಮ್ಮ ಕರ್ತವ್ಯ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿ|ಮಂಜೂಷಾ ಪಾಟೀಲ್‌ ಕುಲಕರ್ಣಿ ಪುಣೆ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಮತ್ತು ಭಜನೆ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್‌ 12 ರಂದು ರಾಜ್ಯಮಟ್ಟದ ದೇಶೀ ಗೋಪಾಲಕ, ಕೃಷಿಕ ಹಾಗೂ ಗೋ-ಉತ್ಪನ್ನ ತಯಾರಕರ ಸಮ್ಮೇಳ ನಡೆಯಲಿದ್ದು ರಾಜ್ಯ ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್‌ ಉದ್ಘಾಟಿಸಲಿದ್ದು, ಸಂಜೆ ಸಂಸ್ಕೃತಿ ಚಿಂತಕರಾದ ಡಾ|ವಿ ಬಿ ಆರತಿ ಅವರಿಂದ ಬದಲಾಗಬೇಕಿರುವ ಪಾಶ್ಚ್ಯಾತ್ಯ ದೃಷ್ಠಿ ವಿಚಾರದಲ್ಲಿ ವಿಶೇಷ ಉಪನ್ಯಾಸ, ಗಿರಿ ಬಳಗ ಕುಂಜಾರು ಮತ್ತು ಹವ್ಯಾಸಿ ಕಲಾವಿದರಿಂದ ಶ್ರೀ ಕುಂಜಾರುಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್‌ 13 ರಂದು ಸಾಮಾಜಿಕ ಕಾರ್ಯಕರ್ತ ರಾಬರ್ಟ್‌ ರೊಸಾರಿಯೊ ಅವರಿಂದ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಮತ್ತು ಭಾರತೀಯತೆ ವಿಚಾರದಲ್ಲಿ ವಿಶೇಷ ಉಪನ್ಯಾಸ ನಡೆಯಲಿದ್ದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಉಡುಪಿಯ ಪ್ರಖ್ಯಾತ ಭರತನಾಟ್ಯ ಕಲಾತಪಸ್ವಿಗಳ ಕೂಡುವಿಕೆಯಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್‌ 14 ರಂದು ಗೀತಾ ಜಯಂತಿ ಪ್ರಯುಕ್ತ ಜಿ ವಿ ಅಯ್ಯರ್‌ ನಿರ್ದೇಶನದ ಭಗವದ್ಗೀತೆ ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು ಸಂಜೆ ರಾಜ್ಯಮಟ್ಟದ ದೇಶೀ ಗೋಪಾಲಕ, ಕೃಷಿಕ ಹಾಗೂ ಗೋ-ಉತ್ಪನ್ನ ತಯಾರಕರ ಸಮ್ಮೇಳನದ ಸಮಾರೋಪ ಸಮಾರಂಭ ಜರುಗಲಿದೆ ವಿ|ವಾರಿಜಾಶ್ರೀ ವೇಣುಗೋಪಾಲ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್‌ 15ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದರ ಬಿ ಎಲ್‌ ಸಂತೋಷ್‌ ಅವರು ಹಿಂದೂ ಧರ್ಮದ ಸ್ಥಿತಿಗತಿಗಳು ಕುರಿತಾಗಿ ವಿಶೇಷ ಉಪನ್ಯಾಸ ನೀಡಲಿದ್ದು, ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇದರ ವತಿಯಿಂದ ಪಾಂಚಜನ್ಯ ಮತ್ತು ರತ್ನಾವತಿ ಕಲ್ಯಾಣ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಡಿಸೆಂಬರ್‌ 16ರಂದು ಕರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು ಪ್ರಜ್ಞಾವಂತ ಸಮಾಜ ನಿರ್ಮಾಣ ಕುರಿತು ಐಪಿಎಸ್‌ ಅಧಿಕಾರಿ ರವಿ ಡಿ ಚನ್ನಣ್ಣನವರ್‌ ಉಪನ್ಯಾಸ ನೀಡಲಿದ್ದು ವಿ|ಪ್ರವೀಣ್‌ ಕುಮಾರ್‌ ಮತ್ತು ಬಳಗದಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.

ಡಿಸೆಂಬರ್‌ 17ರಂದು ಸಿರಿಗೆರೆ ತರಳಬಾಳು ಮಠದ ಡಾ|ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು ವಿ|ರಾಮಕೃಷ್ಣನ್‌ ಮೂರ್ತಿ ಚೆನ್ನೈ ಇವರಿಂದಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಡಿ. 18ರಂದು ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಯಕ್ಷಗಾನ ಕೇಂದ್ರ ಇಂದ್ರಾಳಿ ಇವರಿಂದ ಗುರುದಕ್ಷಿಣೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಿಸೆಂಬರ್‌ 19ರಂದು ಪ್ರಸಾದ್‌ ನೇತ್ರಾಳಯದ ಇವರ ಪ್ರಾಯೋಜಕತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಮತ್ತು ಶಸ್ತ್ರಚಿಕಿತ್ಸೆ ಬೆಳಿಗೆ 8.30 ಕ್ಕೆ ನಡೆಯಲಿದ್ದು ಸಂಜೆ ಕರ್ನಾಟಕ ರಾಜ್ಯದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳ ಪರಿಸ್ಥಿತಿ ಕುರಿತು ಸಿ ಎ ಹರಿಕುತ್ಸ ವಿಶೇಷ ಉಪನ್ಯಾಸ ನೀಡಲಿದ್ದು ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್‌ ಪೈಲೆಟ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ವಿ|ನಾಗರಾಜ ಮತ್ತು ಬಳಗ ಮೈಸೂರು ಇವರಿಂದ ಕಥಕ್‌ ನೃತ್ಯ ಪ್ರದರ್ಶನ ನಡೆಯಲಿದೆ.

ಡಿಸೆಂಬರ್‌ 20ರಂದು ದೇಶ ರಕ್ಷಣೆಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಕುರಿತು ಬಾಜಾಪಾ ತಮಿಳುನಾಡು ಅಧ್ಯಕ್ಷರಾದ ಅಣ್ಣಾಮಲೈ ಅವರು ವಿಶೇಷ ಉಪನ್ಯಾಸ ನೀಡಲಿದ್ದು ಡಿ.21 ರಂದು ಸ್ವಾತಂತ್ರ್ಯೋತ್ತರ ಶಿಕ್ಷಣ ಪದ್ದ ಕುರಿತು ಅಂಕಣಕಾರ ಟಿ ದೇವಿದಾಸ್‌ ಅವರು ಉಪನ್ಯಾಸ ನೀಡಲಿದ್ದು ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರ ವತಿಯಿಂದ ಶುಕ್ರನಂದನೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಡಿಸೆಂಬರ್‌ 22 ರಂದು ಡಾ|ಗುರುರಾಜ ಕರ್ಜಗಿ ಖ್ಯಾತ ಶೀಕ್ಷಣ ತಜ್ಞರು ಇವರಿಂದ ಹಳೆಬೇರು ಹೊಸಚಿಗುರು ಬೆಸುಗೆ ಹೇಗೆ ಕುರಿತು ಉಪನ್ಯಾಸ ನಡೆಯಲಿದ್ದು ವಿ|ವಾಣಿ ಸತೀಶ್‌ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಿ 23ರಂದು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳೀ ಉಪ್ಪಿನಕುದ್ರು ಇವರಿಂದ ಗೊಂಬೆಯಾಟ ಚೂಡಾಮಣಿ ಲಂಕಾದಹನ ಯಕ್ಷಗಾನ ಕಾರ್ಯಕ್ರಮ ಜರುಗಲಿದೆ.ಡಿಸೆಂಬರ್‌ 25 ರಂದು ರಾಜಕಾರಣದಲ್ಲಿ ಯುವ ಪೀಳಿಗೆ ಪ್ರವೇಶ ಕುರಿತು ಬೆಂಗಳೂರು ಸಂಸದರಾದ ತೇಜಸ್ವಿ ಸೂರ್ಯ ಉಪನ್ಯಾಸ ನೀಡಲಿದ್ದು, ವಿ|ಅನಿತಾ ಗುಹಾ ಮತ್ತು ಬಳಗ ಚೆನ್ನೈ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

ಡಿಸೆಂಬರ್‌ 26ರಂದು ವಿಶ್ವಾರ್ಪಣ್‌ ಸಮಾರೋಪ ಸಮಾರಂಭ ಜರುಗಲಿದ್ದು ಕೇಂದ್ರ ಸಚಿವರಾದ ಭಗವಂತ ಖೂಬ, ಪ್ರಹ್ಲಾದ್‌ ಜೋಶಿ ಭಾಗವಹಿಸಲಿದ್ದು ಅದಮಾರು ಮಠದ ಪ್ರಾಯೋಜಕತ್ವದಲ್ಲಿ ನೀಡುವ ಎರಡನೇ ವರ್ಷದ ಯಕ್ಷಗಾನ ಕಲಾಪ್ರಶಸ್ತಿ ಶ್ರೀ ನರಹರಿತೀರ್ಥ ಪ್ರಶಸ್ತಿಯನ್ನು ಶ್ರೀಪಾದ ತಿಮ್ಮಣ್ಣ ಭಟ್ಟ ಸಾಲ್ಕೋಡು ಇವರಿಗೆ ಪ್ರದಾನ ಮಾಡಲಾಗುವುದು. ನಾಡಿನ ಬಡಗು ಮತ್ತು ತೆಂಕುತಿಟ್ಟಿನ ಪ್ರಸಿದ್ದ ಕಲಾವಿದರಿಂದ ಭಕ್ತಿ ಪಾರಮ್ಯ ಕೂಡಾಟ ಯಕ್ಷಗಾನ ನಡೆಯಲಿದೆ.


Spread the love