ತಂದೆಯಿಂದ ಮಗಳ ಮೇಲೆ ಅತ್ಯಾಚಾರ: ಆರೋಪಿ ತಂದೆಗೆ 20 ವರ್ಷ ಕಾರಾಗೃಹ

Spread the love

ತಂದೆಯಿಂದ ಮಗಳ ಮೇಲೆ ಅತ್ಯಾಚಾರ: ಆರೋಪಿ ತಂದೆಗೆ 20 ವರ್ಷ ಕಾರಾಗೃಹ

ಮಂಗಳೂರು: 2020 ನೇ ಮಾರ್ಚ್ ತಿಂಗಳಿನಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ, ಪೆರುವಾಯಿ ಗ್ರಾಮದ, ವಾಸಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆಯಿಂದಲೇ ಅತ್ಯಾಚಾರವೆಸಗಿದ್ದ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, (ಶಿಘ್ರ ಪಥ-2) ಮಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿ ಅಬ್ದುಲ್ ಅಜೀಜ್ (70 ವರ್ಷ) ಎಂಬಾತನಿಗೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಸಾಕ್ಷ್ಯಧಾರಗಳು ಹಾಗೂ ಕೂಲಕುಷ ತನಿಖೆಯನ್ನು ಆಧರಿಸಿ ಘನ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಎಮ್. ರಾಧಕೃಷ್ಣರವರು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಹಾಗೂ 25.000/- ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

ಈ ಪ್ರಕರಣದಲ್ಲಿ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಟಿ.ಡಿ. ನಾಗರಾಜ್ ರವರು ಪೂರ್ಣ ಪ್ರಮಾಣದ ತನಿಖೆ ನಡೆಸಿ, ಆರೋಪಿಯ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿರುತ್ತಾರೆ.
ವೆಂಕಟರಮಣ ಸ್ವಾಮಿ, ಸರ್ಕಾರಿ ಅಭಿಯೋಜಕರು, ಸರ್ಕಾರದ ಪರವಾಗಿ ಘನ ನ್ಯಾಯಾಲಯಲ್ಲಿ ವಾದಿಸಿರುತ್ತಾರೆ.

ವಿಟ್ಲ ಠಾಣಾ ಕೋರ್ಟ್ ಮಾನಿಟರಿಂಗ್ ಸೆಲ್ ನ ಅಧಿಕಾರಿ ಸಿಬ್ಬಂಧಿಗಳು ಸಮರ್ಪಕವಾಗಿ ಪ್ರಕರಣದ ವಿಚಾರಣಾ ಹಂತಗಳನ್ನು ಫಾಲೋ ಅಪ್ ಮಾಡಿರುತ್ತಾರೆ.


Spread the love

Leave a Reply

Please enter your comment!
Please enter your name here