ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛ ಸಾಗರ ಕಾರ್ಯಕ್ರಮ

Spread the love

ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛ ಸಾಗರ ಕಾರ್ಯಕ್ರಮ

ಯುವ ರೆಡ್ ಕ್ರಾಸ್ ಘಟಕ ಯೆನೆಪೋಯ ವಿಶ್ವವಿದ್ಯಾನಿಲಯ ದೇರಳಕಟ್ಟೆ ಹಾಗು ಲಯನ್ಸ್ ಕ್ಲಬ್ ಕಾವೂರ್ ಇವರ ವತಿಯಿಂದ ೨೪.೦೯.೨೦೨೨ ರಂದು ಪೂರ್ವಾನ್ಹ ೭ ರಿಂದ ಸ್ವಚ್ಛ ಸಾಗರ ಕಾರ್ಯಕ್ರಮವನ್ನು ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಹಮ್ಮಿಕೊಳ್ಳಲಾಯಿತು

ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿ ಶ್ರೀ ಅಶ್ವಿನ್ ಕುಮಾರ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಸಮುದ್ರ ಕಿನಾರೆಯನ್ನು ಯುವ ರೆಡ್ ಕ್ರಾಸ್ ಸ್ವಯಂ ಸೇವಕರು ಮತ್ತು ಲಯನ್ಸ್ ಕ್ಲಬ್ ಕಾವೂರ್ ಸದಸ್ಯರು ಸ್ವಚ್ಛಗೊಳಿಸಿ ತಾಜ್ಯವಿಲೇವಾರಿ ಲಕೋಟೆಗಳಲ್ಲಿ ತುಂಬಿದರು. ಯುವ ರೆಡ್ ಕ್ರಾಸ್ ಸ್ವಯಂಸೇವಕರು ೫ ಗುಂಪುಗಳಲ್ಲಿ ಸ್ವಚ್ಛ ಸಾಗರ ಬಿಂಬಿಸುವ ಮರಳಿನ ಕಲಾಕೃತಿ ತಯಾರಿಸಿದರು, ತದನಂತರ ಹತ್ತಿರದ ಎಲ್ಲ ಅಂಗಡಿಗಳಿಗೂ ಸ್ವಚ್ಛತೆಯ ಘೋಷಣೆ ಸಾರುವ ಭಿತ್ತಿಚಿತ್ರಗಳನ್ನು ಅಂಟಿಸಲಾಯಿತು.

ಯುವ ರೆಡ್ ಕ್ರಾಸ್ ಸ್ವಯಂಸೇವಕರು ಸ್ವಚ್ಛಸಾಗರ ಸಂದೇಶ ಸಾರುವ ಗುಂಪು ನೃತ್ಯ ಪ್ರದರ್ಶಿಸಿದರು. ಲಯನ್ಸ್ ಕ್ಲಬ್ ನ ಶ್ರೀ ನಿತ್ಯಾನಂದ ಶೆಟ್ಟಿ, ಕಾರ್ಯಕ್ರಮದಲ್ಲಿ ಯೆನೆಪೋಯ ವಿಶ್ವವಿದ್ಯಾನಿಲಯ ರೆಡ್ ಕ್ರಾಸ್ ಅಧಿಕಾರಿಗಳು ಹಾಗು ಸ್ವಯಂ ಸೇವಕರು ಕಾರ್ಯಕ್ರಮವನ್ನು ಶ್ಲಾಘಿಸಿದರು.

ಶ್ರೀಮತಿ ನಿತ್ಯಶ್ರೀ ಬಿ ವಿ ನೋಡಲ್ ಅಧಿಕಾರಿಗಳು ಯುವ ರೆಡ್ ಕ್ರಾಸ್ ಯೆನೆಪೋಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಕಾರ್ಯಕ್ರಮ ನೀರೂಪಿಸಿದರು. ಡಾ. ಸಯ್ಯದ್, ಡಾ. ಅರುಣ್ ದೀಪ್, ಡಾ. ತಾರಿಕ್, ಡಾ. ಹರಿನಾರಾಯಣ, ಶ್ರೀ. ವಿಕ್ಟರ್ ಮೊರಾಸ್ , ಕಾರ್ಯಕ್ರಮ ಅಧಿಕಾರಿಗಳು ಯುವ ರೆಡ್ ಕ್ರಾಸ್, ಕಾರ್ಪೊರೇಟರ್ ಹೇಮಲತಾ ರಘು, ಸಾಲಿಯಾನ್ ಸ್ವರೂಪ ಶೆಟ್ಟಿ ಇವರು ಉಪಸ್ಥಿತರಿದ್ದರು


Spread the love