ತನ್ನ ಸ್ಥಾನ ಉಳಿಸಿಕೊಳ್ಳಲು ಕಟೀಲ್ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ- ಶೌವಾದ್ ಗೂನಡ್ಕ

Spread the love

ತನ್ನ ಸ್ಥಾನ ಉಳಿಸಿಕೊಳ್ಳಲು ಕಟೀಲ್ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ- ಶೌವಾದ್ ಗೂನಡ್ಕ

ಮಂಗಳೂರು: ಕರ್ನಾಟಕ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ ವಿರುದ್ಧ ಅಸಂಬದ್ಧವಾಗಿ ಹೇಳಿಕೆಯನ್ನು ನೀಡಿರುವ ರಾಜ್ಯ ಬಿ.ಜೆ.ಪಿ.ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ತಮ್ಮ ಸ್ಥಾನಮಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಆ ಕಾರಣದಿಂದ ಹೈಕಮಾಂಡನ್ನು ಮೆಚ್ಚಿಸಲು ಇಂತಹ ಅಪ್ರಬುದ್ಧತೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಳಿನ್ ರವರು ಮೊದಲು ತಮ್ಮ ರಾಜ್ಯಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳಲಿ ನಂತರ ಸಿದ್ದರಾಮಯ್ಯರವರು ಕಾಂಗ್ರೆಸ್ ಪಕ್ಷ ಬಿಟ್ಟು ಹೋಗುತ್ತಾರಾ ಎಂಬುವುದರ ಕುರಿತಾಗಿ ಚಿಂತಿಸಲಿ ಎಂದು ಕೆ.ಪಿ.ಸಿ.ಸಿ.ವಕ್ತಾರರಾದ ಶೌವಾದ್ ಗೂನಡ್ಕರವರು ಹೇಳಿದ್ದಾರೆ.

ನಳಿನ್ ಕುಮಾರ್ ಕಟೀಲ್ ರವರು ಕರಾವಳಿಗೆ ಸೀಮಿತಗೊಂಡ ನಾಯಕ ಇಂತಹವರನ್ನು ಬಿ.ಜೆ.ಪಿ.ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅವರದ್ದೇ ಪಕ್ಷದಲ್ಲಿ ಅಸಮಾಧಾನವಿದೆ.ಆ ಕಾರಣದಿಂದ ಕಟೀಲ್ ರವರ ಕುರ್ಚಿ ಅಲುಗಾಡುತ್ತಿದೆ. ಮುಂದಿನ ಮುಖ್ಯಮಂತ್ರಿಯಾಗುವ ಕನಸಿನಲ್ಲಿದ್ದ ಅವರಿಗೆ ಇದು ಬಿಸಿತುಪ್ಪವಾಗಿ ಪರಿಣಮಿಸಿದೆ. ಆ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ಮೆಚ್ಚಿಸಲು ಸಿದ್ದರಾಮಯ್ಯರವರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೇವಲ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಹಾಗೂ ಕೋಮುದ್ವೇಷ ಚಿಂತನೆಗಳನ್ನು ಹೊಂದಿರುವ ನಳಿನ್ ಕುಮಾರ್ ಕಟೀಲ್ ರಂತಹ ನಾಯಕರಿಗೆ ಸಿದ್ದರಾಮಯ್ಯರಂತಹ ಮೇರು ವ್ಯಕ್ತಿತ್ವದ ನಾಯಕರ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಅವರಿಗಿಲ್ಲವೆಂದು ಶೌವಾದ್ ಗೂನಡ್ಕರವರು ತಿಳಿಸಿದ್ದಾರೆ.


Spread the love

2 Comments

  1. When accusing someone that that they are issuing illogical/irrelevant statements, at least quote the statements and say why those statements are illogical/irrelevant. just accusing with no basis makes these statements (such as the one provided in the press release) also seem irreleavant and issued to please someone with an intention to get brownie points from their party leaders.

Comments are closed.