ತಲಪಾಡಿ ಗ್ರಾಪಂ ನಲ್ಲಿ ಎಸ್ ಡಿ ಪಿ ಐ ವಿರುದ್ಧ ಕತ್ತಿ ಮಸೆಯುತ್ತಲೇ ಕೈಜೋಡಿಸಿದ ಬಿಜೆಪಿ !

Spread the love

ತಲಪಾಡಿ ಗ್ರಾಪಂ ನಲ್ಲಿ ಎಸ್ ಡಿ ಪಿ ಐ ವಿರುದ್ಧ ಕತ್ತಿ ಮಸೆಯುತ್ತಲೇ ಕೈಜೋಡಿಸಿದ ಬಿಜೆಪಿ !

ಮಂಗಳೂರು: ಎಸ್ ಡಿ ಪಿ ಐ ಪಕ್ಷ ವಿರುದ್ದ ಸದಾ ಕತ್ತಿ ಮಸೆಯುತ್ತಲೇ ಇರುವ ಭಾರತೀಯ ಜನತಾ ಪಕ್ಷ ಮಂಗಳೂರು ಹೊರವಲಯದ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಪರಸ್ಪರ ಕೈಜೋಡಿಸಿ ಘಟನೆ ನಡೆದಿದೆ.

ಮಂಗಳೂರು ಹೊರವಲಯದ ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಗುರುವಾರ ನಡೆದಿದ್ದು 24 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ 13 ಸ್ಥಾನ ಹೊಂದಿದ್ದರೂ ಕೂಡ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಇಬ್ಬರು ಬಿಜೆಪಿ ಬೆಂಬಲಿತರು ಎಸ್ಡಿಪಿಐ ಅಭ್ಯರ್ಥಿಗೆ ಬೆಂಬಲ ನೀಡಿದ್ದು ಈ ವೇಳೆ ಸಮಬಲ ಬಂದಿದ್ದರಿಂದ ಚೀಟಿ ಎತ್ತು ಪ್ರಕ್ರಿಯೆಯಲ್ಲಿ ಎಸ್ಡಿಪಿಐ ಅಭ್ಯರ್ಥಿ ಇಸ್ಮಾಯಿಲ್ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗೆ ಬಿಜೆಪಿ ಸದಸ್ಯರಿಂದಲೇ ಬೆಂಬಲ ನೀಡಿದ್ದು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಮಹಿಳೆ ಆಯ್ಕೆಯಾಗಿದ್ದಾರೆ.


Spread the love