ತಲಪಾಡಿ: ಬಾರ್ ಗೆ ನುಗ್ಗಿ ಲಕ್ಷಾಂತರ ಕಳವು

Spread the love

ತಲಪಾಡಿ: ಬಾರ್ ಗೆ ನುಗ್ಗಿ ಲಕ್ಷಾಂತರ ಕಳವು

ಉಳ್ಳಾಲ: ತಲಪಾಡಿಯ ಮರೋಳಿ ಬಾರ್ ಗೆ ನುಗ್ಗಿರುವ ಕಳ್ಳ ರೂ.2 ಲಕ್ಷ ನಗದು ಹಾಗೂ ಬಾಟಲಿಗಳನ್ನು ಕಳವುಗೈದಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದ್ದು, ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮರೋಳಿ ಬಾರ್ ನ ಶೌಚಾಲಯದ ಕಿಟಕಿ ಮೂಲಕ ಒಳನುಗ್ಗಿರುವ ಕಳ್ಳ, ಬಾಗಿಲನ್ನು ಮುರಿದು ಒಳನುಗ್ಗಿ ಕ್ಯಾಷಿನಲ್ಲಿರಿಸಲಾಗಿದ್ದ ರೂ.2 ಲಕ್ಷ ನಗದು ಕಳವುಗೈದಿದ್ದಾನೆ. ಜೊತೆಗೆ ಕೆಲವು ಬಾಟಲಿಗಳನ್ನು ಕಳವು ನಡೆಸಿದ್ದಾನೆ. ಬಾರ್ ಒಳಗಡೆ ವಿಚಾರ ತಿಳಿದಿರುವ ವ್ಯಕ್ತಿಯೇ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ. ಬಾರ್ ಮಾಲೀಕರಿಗೆ ಬಸ್ಸಿದ್ದು, ಅದಕ್ಕಿರುವ ವಾಚ್ ಮೆನ್ ಕೂಡ ಇರದ ಸಮಯವನ್ನು ಉಪಯೋಗಿಸಿ ಕೃತ್ಯವೆಸಗಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದೆ.

ಘಟನೆ ಕುರಿತು ಬಾರ್ ಮಾಲೀಕ ಸುನಿಲ್ ಮರೋಳಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love