
Spread the love
ತಲವಾರು ದಾಳಿ ನಡೆಸಿದ ಮೂವರನ್ನು ಬಂಧಿಸಿದ ಕಾವೂರು ಪೊಲೀಸರು
ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ಅನ್ಯಕೋಮಿನ ವ್ಯಕ್ತಿಯ ಮೇಲೆ ತಲವಾರು ದಾಳಿ ನಡೆಸಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಂಜಿಮೊಗರು ನಿವಾಸಿ ಚರಣ್ ರಾಜ್ (23), ಸುಮಂತ್ ಬರ್ಮನ್ ಕುಳಾಯಿ (24) ಮತ್ತು ಅವಿನಾಶ್ ಕೋಡಿಕಲ್ (24) ಎಂದು ಗುರುತಿಸಲಾಗಿದೆ.
ಅಗಸ್ಟ್ 20ರಂದು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ ವಿ ಶೆಟ್ಟಿ ಕಾಲೇಜು ರೋಡು ಬಳಿನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿಗಳನ್ನು ಸ್ಕೂಟಿಯಲ್ಲಿ ಬಂದು ಅಡ್ಡ ಹಾಕಿ ತಡೆದು ತಲವಾರು ಬೀಸಿದ್ದು ಈ ವೇಳೆ ಮುಖಕ್ಕೆ ಗಾಯವಾಗಿರುತ್ತದೆ. ಆರೋಪಿಗಳನ್ನು ಬಂಧಿಸಿ ತಲವಾರು ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
Spread the love