ತಲೆ ಮರೆಸಿಕೊಂಡ ಇಬ್ಬರು ಆರೋಪಿಗಳ ಬಂಧನ

Spread the love

ತಲೆ ಮರೆಸಿಕೊಂಡ ಇಬ್ಬರು ಆರೋಪಿಗಳ ಬಂಧನ

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣದ ಸಂಬಂಧಿಸಿದಂತೆ ತಲೆ ಮರೆಸಿಕೊಂಡ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ನ್ಯಾಯಲಯದ ಸಿ.ಸಿ 445/2016 ಕಲಂ:143,147,148, 504,506,447,427 ಜೊತೆಗೆ 149 IPC ಪ್ರಕರಣದಲ್ಲಿ 2 ವಷ೯ದಿಂದ ತಲೆಮರೆಸಿದ ವಾರಂಟು ಆಸಾಮಿ ಸೋನು ಜೋಯಿ(32) ತಂದೆ:ಜೋಯಿ ಸಿ.ಎಂ ವಾಸ:ವಾಲಾಡಿ ಮನೆ ಶಿಬಾಜೆ ಗ್ರಾಮ ಬೆಳ್ತಂಗಡಿ ತಾಲೂಕು ಎಂಬಾತನನ್ನು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ, ನೆಲ್ಯಾಡಿ ಬಸ್ಸು ತಂಗುದಾಣದಿಂದ ಪೊಲೀಸ್ ವೃತ್ತ ನಿರೀಕ್ಷಕರು ಶಿವಕುಮಾರ್ ಹಾಗೂ ಉಪನಿರೀಕ್ಷಕರಾದ ಅನೀಲಕುಮಾರ್ ಡಿ ರವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸು ಠಾಣಾ ಹೆಚ್ ಸಿ 607 ರಾಜೇಶ್,ಹೆಚ್.ಸಿ 866 ಮಂಜುನಾಥ್ ,ಹಾಗೂ ಪಿ.ಸಿ 2293 ಮಲ್ಲಿಕಾಜು೯ನ ರವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

ಬಂಟ್ವಾಳ ಗ್ರಾಮಂತರ ಪೊಲೀಸ್ ಠಾಣಾ ಆರೋಪಿ ಸುಮಾರು 6 ವರ್ಷಗಳಿಂದ ತಲೆಮರೆಸಿಕೊಂಡಿದ್ದಿ ಇಂತಿ@ಬಶಿರ್ ತಂದೆ: ಮಹಮ್ಮದ್ ವಾಸ: ಕುಂಡಲ ಕಣ್ಣುರು ಮಂಗಳೂರು ಎಂಬಾತನನ್ನು ದಿನಾಂಕ: 6-03-2023 ರಂದು ವಾರೆಂಟ್ ಸಿಬ್ಬಂದಿಯಾದ ಹೆಚ್ ಸಿ 1021ಗಣೇಶ್ ಪ್ರಸಾದದ್ ಪಿ.ಸಿ 2471 ನೆಯವರು ರವರು ಮಾಹಿತಿ ಸಂಗ್ರಹಿಸಿ ಮಂಗಳೂರಿಂದ ದಸ್ತಗಿರಿ ಮಾಡಿಕೊಂಡು ಬಂದು ACJ & JMFC Bantwal ಇಲ್ಲಿಗೆ ಹಾಜರು ಪಡಿಸಲಾಗಿರುತ್ತದೆ.


Spread the love

Leave a Reply

Please enter your comment!
Please enter your name here