
Spread the love
ತಾಯಿ ಗದರಿಸಿದರು ಎಂಬ ಕಾರಣಕ್ಕಾಗಿ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ
ತಾಯಿ ಗದರಿಸಿದರು ಎಂಬ ಕಾರಣಕ್ಕಾಗಿ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಲಶೇಖರ ಬಳಿ ನಡೆದಿದೆ.
ಮೃತರನ್ನು ಜಗದೀಶ್ ಹಾಗೂ ವಿನಯ ದಂಪತಿಗಳ ಪುತ್ರ ಜ್ಞಾನೇಶ್ ಎಂದು ಗುರುತಿಸಲಾಗಿದೆ
ರೆಡ್ ಬ್ರಿಕ್ಸ್ ಅಪಾರ್ಟ್ಮೆಂಟ್ನ ಜಗದೀಶ್, ವಿನಯಾ ದಂಪತಿ ಪುತ್ರ ಜ್ಞಾನೇಶ್ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದ. ಇದರಿಂದ ಬೇಸತ್ತ ತಾಯಿ ವಿನಯಾ ತನ್ನ ಮಗನಿಗೆ ಫೋನ್ ಬಳಸುವ ಬಗ್ಗೆ ಗದರಿದ್ದಾರೆ. ಇದರಿಂದ ಮನನೊಂದ ಬಾಲಕ ಸ್ನಾನ ಮಾಡಿ ಬರುವುದಾಗಿ ರೂಮ್ನೊಳಗೆ ಹೋಗಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love