ತಿ.ನರಸೀಪುರದಲ್ಲಿ ಜೋಡಿ ಚಿರತೆಗಳ ಸೆರೆ: ನೆಮ್ಮದಿಯುಸಿರು ಬಿಟ್ಟ ಜನ

Spread the love

ತಿ.ನರಸೀಪುರದಲ್ಲಿ ಜೋಡಿ ಚಿರತೆಗಳ ಸೆರೆ: ನೆಮ್ಮದಿಯುಸಿರು ಬಿಟ್ಟ ಜನ

ತಿ.ನರಸೀಪುರ: ತಾಲೂಕಿನ ಮುಸುವಿನಕೊಪ್ಪಲು ಗ್ರಾಮದಲ್ಲಿನ ತೋಟವೊಂದರಲ್ಲಿ ಜೋಡಿ ಚಿರತೆಗಳು ಸೆರೆ ಸಿಕ್ಕಿವೆ. ಇದರಿಂದ ಚಿರತೆ ಭಯದಲ್ಲಿರುವ ಜನ ನೆಮ್ಮದಿಯುಸಿರು ಬಿಡುವಂತಾಗಿದೆ.

ಚಂದ್ರಪ್ಪ ಎಂಬುವರ ತೋಟದಲ್ಲಿ ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿಗೆ ಎರಡು ಚಿರತೆಗಳು ಸೆರೆ ಸಿಕ್ಕಿದ್ದು, ತಾಲೂಕಿನಾದ್ಯಂತ ಚಿರತೆ ದಾಳಿಯಿಂದ ಆತಂಕಗೊಂಡಿದ್ದ ಜನ ತುಸು ನೆಮ್ಮದಿಪಡುವಂತಾಗಿದೆ. ಈ ಭಾಗದಲ್ಲಿ ಚಿರತೆಗಳು ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯು ಚಿರತೆ ಸೆರೆಗೆ  ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು. ತತ್ ಪರಿಣಾಮ ಶುಕ್ರವಾರ ಎರಡು ಚಿರತೆಗೆಳು ಒಂದೇ ಬೋನಿನಲ್ಲಿ ಸೆರೆ ಸಿಕ್ಕಿವೆ.

ತಾಲೂಕಿನಾದ್ಯಂತ ಚಿರತೆ ದಾಳಿಯಿಂದ ನಾಲ್ಕು ಜನರು ಬಲಿಯಾಗಿದ್ದು, ಜನತೆಯಲ್ಲಿ ಆತಂಕ ಹೆಚ್ಚಾಗಿತ್ತು. ಅಲ್ಲದೆ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಭಯಭೀತಗೊಂಡಿದ್ದರು. ಈಗ ಮತ್ತೆರಡು ಚಿರತೆಗಳು ಸೆರೆ ಸಿಕ್ಕಿರುವುದರಿಂದ ಜನರ ಆತಂಕ ದೂರವಾಗಿದೆ. ಅರಣ್ಯ ಇಲಾಖೆಯು ಈಗಾಗಲೇ ಹಲವು ಚಿರತೆಗಳನ್ನು ಸೆರೆ ಹಿಡಿದಿದ್ದು, ಕಾರ್ಯಾಚರಣೆ ತೀವ್ರಗೊಳಿಸಿ ಮತ್ತಷ್ಟು ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚಿರತೆ ಸೆರೆಸಿಕ್ಕ ಸ್ಥಳಕ್ಕೆ ಡಿಸಿಎಫ್ ಬಸವರಾಜು, ಎಸಿಎಫ್ ಲಕ್ಷ್ಮಿಕಾಂತ್, ಅರಣ್ಯಾಧಿಕಾರಿ ಅಹಮದ್ ನದೀಮ್, ಉಮೇಶ್, ಮಂಜುನಾಥ್ ಇತರರು ಹಾಜರಿದ್ದರು.


Spread the love