ತಿ.ನರಸೀಪುರದಲ್ಲಿ ಮತ್ತೆ ಚಿರತೆ ದಾಳಿ

Spread the love

ತಿ.ನರಸೀಪುರದಲ್ಲಿ ಮತ್ತೆ ಚಿರತೆ ದಾಳಿ

ತಿ.ನರಸೀಪುರ: ಮುಂದುವರಿದ ನರ ಭಕ್ಷಕ ಚಿರತೆ ದಾಳಿಗೆ ಸಿಲುಕಿ ಪ್ರಾಣಾಪಾಯದಿಂದ ಪಾರದ ಘಟನೆ ತಾಲೂಕಿನ ನುಗ್ಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಬನ್ನೂರು ಹೋಬಳಿಯ ನುಗ್ಗೆನಹಳ್ಳಿ ಗ್ರಾಮದ ಸತೀಶ್ ತಮ್ಮ ಜಮೀನಿಗೆ ಹೋಗಿದ್ದ ವೇಳೆ ಚಿರತೆ ಸತೀಶ್ ಮೇಲೆ ದಾಳಿ ಮಾಡಿದ್ದು ಚಿರತೆ ಬಾಯಿಂದ ತಪ್ಪಿಸಿಕೊಂಡು ಊರಿಗೆ ಬಂದಿದ್ದಾನೆ ಗಾಯಗೊಂಡಿದ್ದ ಸತೀಶ್ ಅವರನ್ನು ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ಕರೆತಂದು ಆ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ

ರೈತ ಮುಖಂಡ ನಾರಾಯಣ್ ಈ ಬಗ್ಗೆ ಮಾತನಾಡಿ ಚಿರತೆ ದಾಳಿ ನಡೆದ ಸುದ್ದಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಸತೀಶ್ ರವರನ್ನು ಘಟನೆ ಬಗ್ಗೆ ಕೇಳಿದೆ ಅವರು ಗದ್ದೆ ಬಳಸಿಕೊಂಡು ಬರುವಾಗ ಚಿರತೆ ನನ್ನ ಮೇಲೆ ಏಗರಿ ಬಂತು ಕೈಯಲ್ಲಿ ಮೊಬೈಲ್ ಹಿಡಿದಿದ್ದೆ ಅದರಿಂದಲೇ ಅದರ ತಲೆಗೆ ಗುದ್ದಿ ನನ್ನ ಕುತ್ತಿಗೆ ಅದಕ್ಕೆ ಸಿಗದಂತೆ ತಳ್ಳಿದೆ ಕೆಳಕ್ಕೆ ಬಿದ್ದ ಚಿರತೆ ಓಡಿ ಹೋಯಿತು ನಾನು ಸಹ ಗಾಬರಿಯಿಂದ ಊರಿಗೆ ಓಡಿಬಂದೆ ಎಂದು ತಿಳಿಸಿದರು ಎಂದು ತಿಳಿಸಿದ್ದಾರೆ ಎಂದರು.

ಈ ಭಾಗದಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಸರ್ವೆ ಮತ್ತು ಕಬ್ಬು ಬೆಳೆದಿರುವುದರಿಂದ ಈ ಪ್ರದೇಶ ಕಾಡಿನಂತಾಗಿದೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ವೈಜ್ಞಾನಿಕ ತಂತ್ರಗಾರಿಕೆ ಬಳಸಿ ಚಿರತೆ ಸೆರೆಗೆ ಪ್ರಯತ್ನ ಮಾಡುತಿದ್ದಾರೆ ಆದರೂ ಚಿರತೆ ಸಿಗುತಿಲ್ಲ ರೈತರು ಜಮೀನುಗಳಿಗೆ ಹೋಗಲಾಗದೆ ಫಸಲು ಹಾಳಾಗುತ್ತಿವೆ ಅರಣ್ಯ ಇಲಾಖೆ ಚಿರತೆ ಹಿಡಿಯಲು ಮತ್ತಷ್ಟು ಕ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.


Spread the love