ತಿ.ನರಸೀಪುರದಲ್ಲಿ ಸೆರೆಸಿಕ್ಕದ ಚಿರತೆ: ಭಯದಲ್ಲಿ ಜನ

Spread the love

ತಿ.ನರಸೀಪುರದಲ್ಲಿ ಸೆರೆಸಿಕ್ಕದ ಚಿರತೆ: ಭಯದಲ್ಲಿ ಜನ

ತಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಯ ಆರ್ಭಟ ಮುಂದುವರೆದಿದ್ದು  ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಲೆ ಬಿಸಿಯಾಗಿದ್ದರೆ, ಜನ ಮಾತ್ರ ಭಯದಲ್ಲಿಯೇ ಬದುಕುವಂತಾಗಿದೆ.

ತಾಲ್ಲೂಕಿನ ಎಂ.ಎಲ್ ಹುಂಡಿ ಯುವಕ ಹಾಗೂ ಎಸ್.ಕೆಬ್ಬೆಹುಂಡಿ ಗ್ರಾಮದ ಯುವತಿಯನ್ನು  ಬಲಿ  ತೆಗೆದುಕೊಂಡಿರುವ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ  ಸೆರೆ ಹಿಡಿಯಲು ಹರಸಾಸ ಪಡುತ್ತಿರುವ  ಸಂದರ್ಭದಲ್ಲೆ ಬನ್ನೂರು ಹೋಬಳಿಯ ಯಾಚನಹಳ್ಳಿ ಗ್ರಾಮದಲ್ಲಿ ರಮೇಶ್ ರವರಿಗೆ ಸೇರಿದ ಕೊಟ್ಟಿಗೆ ಮನೆಯಲ್ಲಿ ಮೇಕೆ ಮೇಲೆ ದಾಳಿ ಮಾಡಿದ್ದು ರೈತರು ಜನಸಾಮಾನ್ಯರು ಜೀವ ಭಯದಲ್ಲಿ ದಿನದೂಡುವಂತಾಗಿದೆ.

ಚಿರತೆ ದಾಳಿಯಿಂದ ಬೆಚ್ಚಿ ಬಿದ್ದಿರುವ ಜನರು ತಮ್ಮ ಜಮೀನುಗಳಿಗೆ ಹೋಗಲು ಭಯ ಪಟ್ಟು ಕುಳಿತಿದ್ದು ಫಸಲುಗಳು ಸಹ ಹಾಳಗುತ್ತಿವೆ ಮತ್ತೊಂದು ಕಡೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡವರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತಿದ್ದಾರೆ ತಾಲ್ಲೂಕಿನ ಜನರು ಹೆಜ್ಜೆ ಹೆಜ್ಜೆಗೂ ಭಯದ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ.

ಯಾಚೇನಹಳ್ಳಿ ಗ್ರಾಮದಲ್ಲಿ ತಡರಾತ್ರಿ ರೈತ ರಮೇಶ್ ಎಂಬುವವರ ಮನೆಯಲ್ಲಿನ ಕೊಟ್ಟಿಗೆಯಲ್ಲಿ ಕಟ್ಟಿದ ಮೇಕೆ ಮೇಲೆ ಚಿರತೆ ದಾಳಿ ಮಾಡಿದ ಸುದ್ದಿ ಮುಟ್ಟುತಿದ್ದಂತೆಯೇ

ಘಟನಾ ಸ್ಥಳಕ್ಕೆ ದೌಡಾಯಿಸಿದ ಶಾಸಕ ಎಂ.ಅಶ್ವಿನ್ ಕುಮಾರ್ ರಮೇಶ್ ಕುಟುಂಬಕ್ಕೆ ಧೈರ್ಯ ತುಂಬಿ ಪರಿಹಾರ ನೀಡಲು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಚಿರತೆ ಸೆರೆಹಿಡಿಯಲು ಅಥವಾ ಕಂಡಲ್ಲಿ ಗುಂಡಿಕ್ಕಲು ಕಾರ್ಯಾಚರಣೆ ಮಾಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳ  ಜೊತೆ ಚರ್ಚಿಸಿದ ಶಾಸಕ ಅಶ್ವಿನ್ ಕುಮಾರ್ ಅಧಿಕಾರಿಗಳಿಂದ ಮಹಿತಿ ಪಡೆದು ಹೆಚ್ಚಿನ ತಂತ್ರಜ್ಞಾನ ಬಳಸಿ ಶೀಘ್ರವೇ ಚಿರತೆಯನ್ನು ಸೆರೆಹಿಡಿಯಿರಿ ಅಥವಾ ಗುಂಡಿಕ್ಕಿ ಎಂದು ಸೂಚನೆ ನೀಡಿದ್ದಾರೆ.

ಒಟ್ಟಾರೆ ಚಿರತೆ ಸೆರೆಯಾಗುವ ತನಕ ಜನರಿಗೆ ನೆಮ್ಮದಿಯಿಲ್ಲದಂತಾಗಿದೆ. ಎರಡು ಬಲಿ ಪಡೆದು ಜನ ಜಾನುವಾರುಗಳಿಗೆ ಕಂಟಕವಾಗಿರುವ ಚಿರತೆಯನ್ನು ಯಾವಾಗ ಸೆರೆ ಹಿಡಿಯುತ್ತಾರೋ ಎಂದು ಜನ ಕಾಯುತ್ತಿದ್ದಾರೆ.


Spread the love