ತುಕ್ಕು ಹಿಡಿಯುತ್ತಿರುವ ಶ್ರದ್ದಾಂಜಲಿ, 108 ವಾಹನ

Spread the love

ತುಕ್ಕು ಹಿಡಿಯುತ್ತಿರುವ ಶ್ರದ್ದಾಂಜಲಿ, 108 ವಾಹನ

ಚಾಮರಾಜನಗರ: ತಾಲೂಕು ಕೇಂದ್ರದಲ್ಲಿ ಶವಸಾಗಿಸುವ ಶ್ರದ್ಧಾಂಜಲಿ ವಾಹನ ಮತ್ತು 108 ಅಂಬ್ಯುಲೆನ್ಸ್ ವಾಹನಗಳು ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗದೆ ತುಕ್ಕುಹಿಡಿಯುವಂತಾಗಿದೆ.

ತಾಲ್ಲೂಕು ಕೇಂದ್ರದಲ್ಲಿ ಯಾವುದಾದರೂ ವ್ಯಕ್ತಿ ಸಾವನ್ನಪ್ಪಿದರೆ ಅಂತಹ ಶವವನ್ನು ಸ್ಮಶಾನದವರೆಗೆ ಇಲ್ಲವೆ, ಶವಗಾರದ ಹೊರಗೆ ಸಾಗಿಸಲು ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ರಾಜ್ಯ ಸರ್ಕಾರ ಪ್ರತಿಯೊಂದು ತಾಲ್ಲೂಕು ಕೇಂದ್ರಗಳಿಗೂ ಶ್ರದ್ದಾಂಜಲಿ ವಾಹನವನ್ನು ನೀಡಿದ್ದು, ಇದರ ಉಪಯೋಗ ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವಿದ್ದು, ಇನ್ನಿತರೆ ಭಾಗಗಳಲ್ಲಿ ಚೆನ್ನಾಗಿರುವ ಚಲಿಸುವ ವಾಹನ ತುಕ್ಕು ಹಿಡಿಯುವ ಸ್ಥಿತಿಗೆ ಬಂದು ತಲುಪುವಂತಾಗಿದೆ.

ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ಭಾಗವಾದ ತಾಯಿ ಮತ್ತು ಮಗುವಿನ ಆಸ್ಪತ್ರೆಯ ಹಿಂಭಾಗದಲ್ಲಿ ಸ್ಥಗಿತವಾಗಿ ತುಕ್ಕು ಹಿಡಿಯುವ ಸ್ಥಿತಿಯಲ್ಲಿ ನಿಂತಿರುವ ಶ್ರದ್ದಾಂಜಲಿ ವಾಹನ ಮತ್ತು 108 ಅಂಬ್ಯುಲೆನ್ಸ್ . ಬಡ ಜನರ ಉಪಯೋಗಕ್ಕೆ ವಾಹನ ನೀಡಿದರೆ ಒಂದು, ಎರಡು ದಿನಗಳು ವಾಹನ ಓಡಿಸಿ, ಗುಜರಿಗೆ ತಳ್ಳುವ ಸಾಂಪ್ರದಾಯ ಅಲ್ಲಿನ ಅಧಿಕಾರಿಗಳದ್ದಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಮುಂದೆ ಖಾಸಗಿ ಆಂಬ್ಯುಲೆನ್ಸ್ ಕಾರುಬಾರು ಜೋರಾಗಿದ್ದು, 10ರಿಂದ 15ದರವರೆಗೆ ಖಾಸಗಿ ಅಂಬ್ಯುಲೆನ್ಸ್ ಇದ್ದು ಆಸ್ಪತ್ರೆಯ ಅಧಿಕಾರಿಗಳು ಖಾಸಗಿಯವರ ಜೊತೆ ಒಳ ಒಪ್ಪಂದ ಮಾಡಿಕೊಡಿದ್ದಾರೆ ಎಂಬ ಆರೋಪವನ್ನು ಜನ ಮಾಡುತ್ತಿದ್ದಾರೆ.

ಒಬ್ಬ ರೋಗಿಯನ್ನು ಖಾಸಗಿ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲು ಅವರು ಕೇಳಿದ ಹಣವನ್ನೇ ನೀಡಬೇಕು. ಆರೋಗ್ಯ ಇಲಾಖೆಯ ಕಾನೂನು ಪ್ರಕಾರ ಖಾಸಗಿ ಅಂಬ್ಯುಲೆನ್ಸ್ ಗಳು ನಿಲ್ಲಿಸಿಕೊಳ್ಳಲು ಅವರು ಸ್ಥಳವನ್ನು ಇಲಾಖೆಗೆ ದಾಖಲು ನೀಡಿರಬೇಕು,

ಚಾಮರಾಜನಗರದ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಅವರ ನಿಲ್ದಾಣವಾಗಿದೆ. ಅಧಿಕಾರಿಗಳಿಗೆ ಮತ್ತು ವೈದ್ಯರಿಗೆ ಖಾಸಗಿ ಅಂಬ್ಯುಲೆನ್ಸ್ ರವರು ಕಮೀಷನ್ ನೀಡುತ್ತಿದ್ದಾರೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


Spread the love

Leave a Reply

Please enter your comment!
Please enter your name here