ತುಳುಕೂಟ ವತಿಯಿಂದ ಡಾ. ಭಾಸ್ಕರಾನಂದ ಕುಮಾರ್ ರವರಿಗೆ ಅಭಿನಂದನೆ 

Spread the love

ತುಳುಕೂಟ ವತಿಯಿಂದ ಡಾ. ಭಾಸ್ಕರಾನಂದ ಕುಮಾರ್ ರವರಿಗೆ ಅಭಿನಂದನೆ 

ಉಡುಪಿ:  ತುಳುಕೂಟದ ಸ್ಥಾಪಕಾಧ್ಯಕ್ಷ ಹಾಗು ಕೈಶಸ್ತ್ರ ಚಿಕಿತ್ಸೆಯಲ್ಲಿ ಮುನ್ನಾಲೆಯಲಿದ್ದ ಡಾ. ಭಾಸ್ಕರಾನಂದ ಕುಮಾರ್ ಇವರಿಗೆ ಜಾಗತಿಕ ಮಟ್ಟದ ಅಂತರಾಷ್ಟ್ರೀಯ “ಪಯೊನೀರ್ ಇನ್ ಹ್ಯಾಂಡ್ ಸರ್ಜರಿ” ಪುರಸ್ಕಾರ ಒಲಿದು ಬಂದಿತ್ತು. ಈ ಪ್ರಯುಕ್ತ ಉಡುಪಿ ತುಳುಕೂಟದ ವತಿಯಿಂದ ಡಾ. ಭಾಸ್ಕರಾನಂದ ಕುಮಾರ್ ರವರಿಗೆ ಅಭಿನಂದನೆ ಸಮಾರಂಭ ಡಯಾನಾ ಹೋಟೆಲ್ ನಲ್ಲಿ ಜರಗಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಪೂರ್ವ ಜನ್ಮದ ಪುಣ್ಯದ ಫಲವಾಗಿ ಈ ಪ್ರಶಸ್ತಿ ಬಂದೊದಗಿತು. ತುಳುಕೂಟದ ಸ್ಥಾಪನೆ ನಾನು ಮಾಡಿದ್ದರು, ಅದನ್ನು ಇಷ್ಟು ದೊಡ್ಡ ಹೆಮ್ಮರವಾಗಿ ಬೆಳೆಯಲು ಹಲವಾರು ಜನರ ತ್ಯಾಗವಿದೆ ಎಂದರು.

ಈ ಸಂದರ್ಭದಲ್ಲಿ ಡಾ.ನಳಿನಿ ಭಾಸ್ಕರಾನಂದ ಕುಮಾರ್, ವಿಶ್ವನಾಥ್ ಶೆಣೈ, ಮುರಳೀಧರ ಉಪಾಧ್ಯ ಹಿರಿಯಡ್ಕ ಉಪಸ್ಥಿತರಿದ್ದರು. ಡಾ. ಗಣನಾಥ ಎಕ್ಕಾರು ಅಭಿನಂದನಾ ಭಾಷಣ ಮಾಡಿದರು.

ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವನೆಗೈದರು. ರತ್ನಾಕರ ಇಂದ್ರಾಳಿ ನಿರೂಪಿಸಿದರು.

ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಸ್ವಾಗತಿಸಿದರು. ತಾರಾ ಆಚಾರ್ಯ ಅಭಿನಂದನಾ ಪತ್ರ ವಾಚಿಸಿದರು. ಚೈತನ್ಯ ಎಂ.ಜಿ ವಂದಿಸಿದರು.


Spread the love