ತುಳುಚಿತ್ರದ ಪೈರಸಿ ಮಾಡಿದ ಆರೋಪ: ದೂರು ದಾಖಲು

Spread the love

ತುಳುಚಿತ್ರದ ಪೈರಸಿ ಮಾಡಿದ ಆರೋಪ: ದೂರು ದಾಖಲು
 
ಮಂಗಳೂರು : ‘ಪೆಪ್ಪೆರೆರೆ ಪೆರೆರೆರೆ’ ತುಳುಚಿತ್ರದ ಪೈರಸಿ ಮಾಡಿರುವ ಬಗ್ಗೆ ಯೂಟ್ಯೂಬ್ ಚಾನಲ್‌ವೊಂದರ ವಿರುದ್ಧ ದೂರು ದಾಖಲಾಗಿದೆ.

ನಿಶಾನ್ ವರುಣ್ ಮೂವೀಸ್ ಎಂಬ ಸಂಸ್ಥೆಯು ‘ಪೆಪ್ಪೆರೆರೆ ಪೆರೆರೆರೆ’ ಎಂಬ ತುಳು ಚಲನಚಿತ್ರವನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಅನುಮೋದನೆ ಪಡೆದು ಸುಮಾರು 1 ಕೋ.ರೂ.

ವೆಚ್ಚದಲ್ಲಿ ನಿರ್ಮಾಣ ಮಾಡಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಮಾಡಿತ್ತು.

ಆದರೆ ಈ ಚಲನಚಿತ್ರವನ್ನು ತುಳು ಸೂಪರ್ ಕಾಮಿಡಿ 2.0 ಎಂಬ ಯ್ಯೂಟ್ಯೂಬ್ ಚಾನಲ್‌ರವರು ಪೈರಸಿ ಮಾಡಿ ಮತ್ತು ಚಲನಚಿತ್ರದ ತಯಾರಕ ನಿಶಾನ್ ವರುಣ್ ಮೂವೀಸ್ ಸಂಸ್ಥೆಯ ಅನುಮತಿ ಪಡೆಯದೆ ಪ್ರಸಾರ ಮಾಡಿ ನಿಶಾನ್ ವರುಣ್ ಮೂವೀಸ್ ಸಂಸ್ಥೆಯವರಿಗೆ ಮೋಸ ಮಾಡಿ ನಷ್ಟ ಉಂಟು ಮಾಡಿದ್ದಾರೆ ಎಂದು ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.


Spread the love