Home Mangalorean News Kannada News ತುಳುಭವನದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನೆ

ತುಳುಭವನದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನೆ

Spread the love

ತುಳುಭವನದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಉದ್ಘಾಟನೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದೇಲಂಪಾಡಿ ಯೋಗ ಪ್ರತಿಷ್ಠಾನ, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಉರ್ವಸ್ಟೋರಿನಲ್ಲಿರುವ ತುಳುಭವನದ ‘ಸಿರಿಚಾವಡಿ’ ಯಲ್ಲಿ 8 ರಿಂದ 16 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಉಚಿತ ‘ಯೋಗ ತರಬೇತಿ ಶಿಬಿರ’ ವು ಉದ್ಘಾಟನೆಗೊಂಡಿತು.

ಯೋಗ ಶಿಬಿರವನ್ನು ಉದ್ಘಾಟಿಸಿದ ದ. ಕ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರದಾದ ಶ್ರೀ ಸುಂದರ ಪೂಜಾರಿಯವರು, ದೈಹಿಕ ಮತ್ತು ಮಾನಸಿಕ ದೃಢತೆಗಾಗಿ ಯೋಗಾಭ್ಯಾಸ ಅತೀ ಅಗತ್ಯ ಇಂತಹ ಕಾರಣಗಳಿಂದಾಗಿಯೇ ಯೋಗ ಇಂದು ವಿಶ್ವ ಮಾನ್ಯವಾಗಿದೆ ಮತ್ತು ಯೋಗ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲರೂ ಇದರ ಪ್ರಯೋಜನವನ್ನು ಪಡಕೊಳ್ಳುವಂತಾಗಲಿ ಎಂದು ಯೋಗ ಶಿಬಿರಕ್ಕೆ ಶುಭ ಹಾರೈಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರವಿ ಕುಮಾರ್, ನಿಸರ್ಗ ಪಬ್ಲಿಸಿಟಿಯ ಮಂಜುನಾಥ ನಿಸರ್ಗ ಇವರುಗಳು ಉಪಸ್ಥಿತರಿದ್ದರು.

ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗ ಶಿವಿರದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿ ಗಣ್ಯರನ್ನು ಸ್ವಾಗತಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಇವರು ಶಿಬಿರಾರ್ಥಿಗಳಿಗೆ ಶುಭಾ ಹಾರೈಸಿದರು.
10 ದಿನಗಳ ಕಾಲ ನಡೆಯಲಿರುವ ಈ ಉಚಿತ ಯೋಗ ತರಬೇತಿ ಶಿಬಿರದಲ್ಲಿ 8 ರಿಂದ 16 ವರ್ಷದೊಳಗಿನ 50 ಕ್ಕೂ ಹೆಚ್ಚು ಶಿಬಿರಾರ್ಥಿಗಳು ನೋಂದಾಯಿಸಿ ಕೊಂಡಿರುತ್ತಾರೆ. ದೇಲಂಪಾಡಿ ಯೋಗ ಪ್ರತಿಷ್ಠಾನದ ಸ್ವಯಂ ಸೇವಕರು ಸಹಕರಿಸಿದ್ದರು.


Spread the love

Exit mobile version