ತೆಂಕನಿಡಿಯೂರು ಗ್ರಾಪಂ ಚುನಾವಣೆಯಲ್ಲಿ ಗೆದ್ದ ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಅಭಿನಂದನೆ

Spread the love

ತೆಂಕನಿಡಿಯೂರು ಗ್ರಾಪಂ ಚುನಾವಣೆಯಲ್ಲಿ ಗೆದ್ದ ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಅಭಿನಂದನೆ

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ವತಿಯಿಂದ ಅಭಿನಂದಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿ ಗೆದ್ದ ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕಾಂಗ್ರೆಸ್ ಮುಗಿಯಿತು ಮುಗಿಯಿತು ಅಂತ ಪ್ರಚಾರ ಮಾಡಿದರು ಆದರೆ ಇಂದು ಕಾಂಗ್ರೆಸ್ ಅಧಿಕಾರ ಇಲ್ಲದೆಯೂ ಅತಿಹೆಚ್ಚು ಸ್ಥಾನ ಪಡೆದು ಪ್ರಥಮ ಸ್ಥಾನಕ್ಕೆ ತಲುಪಿದೆ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದೆ ಬರುತ್ತದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಉತ್ತಮ ಫಲಿತಾಂಶ ನೀಡಿರುವುದು ಗ್ರಾಮದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ತೆಂಕನಿಡಿಯೂರು ಗ್ರಾಮ ಪಂಚಾಯತ್ ಚುನಾಯಿತ ಸದಸ್ಯ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಹಿಂದೆಯೂ ಗೆದ್ದ ಹಾಗೂ ಸ್ಪರ್ಧಿಸಿದ ಅಭ್ಯರ್ಥಿಗಳು ಸತತವಾಗಿ ಜನರೊಂದಿಗೆ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಗ್ರಾಮ ಪಂಚಾಯತ್ ನಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಬೇಧ ಮರೆತು ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಕೈಜೋಡಿಸಲಾಗುವುದು ಎಂದರು.

ಇದೇ ವೇಳೆ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಪ್ರೋತ್ಸಾಹಿದ ಎಲ್ಲಾ ಮತದಾರರಿಗೂ, ಗ್ರಾಮಸ್ಥರಿಗೂ ಸಹಕಾರ ನೀಡಿದ ಮಾಜಿ ಸಚಿವರಿಗೂ ಜಿಲ್ಲಾ ಮಟ್ಟದ ಪಕ್ಷದ ನಾಯಕರಿಗೂ, ಹಗಲಿರುಳು ಬೆಂಬಲಿತ ಅಭ್ಯರ್ಥಿಗಳ ಪರವಾಗಿ ದುಡಿದ ಕಾರ್ಯಕರ್ತರಿಗೆ ಪ್ರಖ್ಯಾತ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು

ಈ ವೇಳೆ ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಸ್ತುವಾರಿ ಮಾಧವ ಬನ್ನಂಜೆ, ತೆಂಕನಿಡಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಯತೀಶ್ ಕರ್ಕೇರಾ, ತಾಲೂಕು ಪಂಚಾಯತ್ ಸದಸ್ಯ ಧನಂಜಯ ಕುಂದರ್, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಥ್ವಿರಾಜ್ ಶೆಟ್ಟಿ, ಮೀನಾ ಪಿಂಟೊ, ಸತೀಶ್ ನಾಯಕ್, ಸುರೇಶ್ ನಾಯಕ್, ಅನುಷಾ ಆಚಾರ್ಯ, ಸಿಂಪ್ರಿಯನ್ ರೊಡ್ರಿಗಸ್, ಮಂಜುನಾಥ ಆಚಾರ್ಯ, ವಿನಯ ಆಚಾರ್ಯ, ವೆಂಕಟೇಶ ಕುಲಾಲ್, ಶರತ್ ಶೆಟ್ಟಿ, ರವಿರಾಜ್, ಪಕ್ಷದ ಪ್ರಮುಖರರಾದ ಕೃಷ್ಣ ಎಸ್ ಅಮೀನ್, ರಾಘು ಕೋಟ್ಯಾನ್, ಸುಶೀಲಾ ಜಿ ಕೋಟ್ಯಾನ್, ಸುರೇಶ್ ಕುಮಾರ್, ಪ್ರಭಾಕರ ಅಂಚನ್, ರಾಮಚಂದ್ರ ನಾಯಕ್, ಆಶಾ ರಾಮಚಂದ್ರ, ವಸಂತ ಲಕ್ಷ್ಮೀ ನಗರ, ರೆಹಮಾನ್, ಪ್ರದೀಪ್ ಅಂಚನ್, ಪ್ರಜ್ವಲ್ ಅಂಚನ್, ರಾಜೇಶ್, ರೆಜಿನಾಲ್ಡ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love