ತೆಂಕನಿಡಿಯೂರು ಗ್ರಾಪಂ ಜಾತಿ ನಿಂದನೆ ಪ್ರಕರಣ- 4 ಗ್ರಾಪಂ ಸದಸ್ಯರು ಸೇರಿದಂತೆ ಐವರಿಗೆ ಜಾಮೀನು ಮಂಜೂರು

Spread the love

ತೆಂಕನಿಡಿಯೂರು ಗ್ರಾಪಂ ಜಾತಿ ನಿಂದನೆ ಪ್ರಕರಣ- 4 ಗ್ರಾಪಂ ಸದಸ್ಯರು ಸೇರಿದಂತೆ ಐವರಿಗೆ ಜಾಮೀನು ಮಂಜೂರು

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡದೇ ಪಂಚಾಯತ್ ಮುಖ್ಯದ್ವಾರವನ್ನೇ ಬದಲಾವಣೆ ಮಾಡಿದ್ದಕ್ಕೆ ಪ್ರತಿಭಟಿನೆ ನಡೆಸಿದವರ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥೆಯ ವಿರುದ್ದ ಹಾಕಿದ್ದ ಜಾತಿ ನಿಂದನೆ ಪ್ರಕರಣದ ನಾಲ್ಕು ಮಂದಿಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.

ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡದೇ ಪಂಚಾಯತ್ ಮುಖ್ಯದ್ವಾರವನ್ನೇ ಬದಲಾವಣೆ ಮಾಡಿದ್ದು ಇದನ್ನು ಪ್ರತಿಭಟನೆಯಲ್ಲಿ ಪ್ರಶ್ನಿಸಿದ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ನಾಯಕ್, ಸತೀಶ್ ನಾಯಕ್ ,ಮೀನಾ ಪಿಂಟೊ, ಪ್ರಥ್ವಿರಾಜ್ ಶೆಟ್ಟಿ ಮತ್ತು ಗ್ರಾಮಸ್ಥರಾದ ಲಲಿತಾ ಆಚಾರ್ಯ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಜಾತಿ ನಿಂದನೆ ಪ್ರಕರಣ ದಾಖಲಿಸದ್ದರು.

ನಾಲ್ವರಿಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಐದು ಮಂದಿಯ ಪರವಾಗಿ ವಕೀಲ ಹರೀಶ್ ಶೆಟ್ಟಿ ಪಾಂಗಾಳ ಪ್ರತಿನಿಧಿಸಿದ್ದರು


Spread the love