
ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಉಡುಪಿ: ತೆಂಕನಿಡಿಯೂರು ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ ತೆಂಕನಿಡಿಯೂರು ರಾಧ್ಮಾ ರೆಸಿಡೆನ್ಸಿ ಬಳಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಬಿಜೆಪಿ ಸರಕಾರದ ಸುಳ್ಳು ಭರವಸೆಗಳಿಂದ ಬೇಸತ್ತ ಜನರ ಕಾಂಗ್ರೆಸ್ ಪಕ್ಷದ ಆಡಳಿತದ ಸಂದರ್ಭದಲ್ಲಿ ಆಗಿದ್ದ ಜನಪರ ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಬಯಸಿದ್ದಾರೆ. ಆದರೆ ತಳಮಟ್ಟದ ಸಂಘಟನೆಯಲ್ಲಿ ಯುವಕರನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ ನಾವು ಪ್ರತಿಯೊಂದು ಗ್ರಾಮೀಣ ಕಾಂಗ್ರೆಸ್ ಹಾಗೂ ಬೂತ್ ಮಟ್ಟದ ಸಮಿತಿ ರಚಿಸಿ ಪಕ್ಷವನ್ನು ಇನ್ನುಷ್ಟು ಬಲಾಢ್ಯಗೊಳಿಸುವಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದರು
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಕೆಪಿಸಿಸಿ ಸದಸ್ಯ ದಿನೇಶ್ ಪುತ್ರನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕುಶಲ ಶೆಟ್ಟಿ, ದಿವಾಕರ ಕುಂದರ್, ಕೃಷ್ಣಮೂರ್ತಿ ಆಚಾರ್ಯ, ಪ್ರಸಾದ್ ರಾಜ್ ಕಾಂಚನ್, ಯತೀಶ್ ಕರ್ಕೆರಾ, ಸೌರಭ್ ಬಲ್ಲಾಳ್, ಗಣೇಶ್ ನೇರ್ಗಿ, ಮಮತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಪಂಚಾಯತ್ ಸದಸ್ಯರು ಹಾಗೂ ಪ್ರಮುಖರಾದ ಪ್ರಥ್ವಿರಾಜ್ ಶೆಟ್ಟಿ, ಸುರೇಶ್ ನಾಯಕ್, ವೆಂಕಟೇಶ್ ಕುಲಾಲ್, ಶರತ್ ಶೆಟ್ಟಿ, ರವಿರಾಜ್ ಮಂಜುನಾಥ್ ಆಚಾರ್ಯ, ಅನುಶಾ, ವಿನಯ್ ಆಚಾರ್ಯ, ರಾಜೇಶ್ ನಾಯಕ್, ಸುರೇಶ್ ಕುಮಾರ್, ಪ್ರದೀಪ್ ಪಾಲನ್, ಅನಿಲ್ ಪಾಲನ್, ಆಗ್ನೆಲ್ ಫೆರ್ನಾಂಡಿಸ್, ವಿಲ್ಫ್ರೇಡ್, ರೆಜಿನಾಲ್ಡ್, ಸರಸ್ವತಿ, ದೀಪಕ್, ಪ್ರತಿಮಾ ಸುವರ್ಣ, ರಾಜೇಶ್ ಕರ್ಕೇರಾ, ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.