ತೆಂಕನಿಡಿಯೂರು: ವೀರಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ಲೋಬಾನ ಸೇವೆ

Spread the love

ತೆಂಕನಿಡಿಯೂರು: ವೀರಮಾರುತಿ ವ್ಯಾಯಾಮ ಶಾಲೆಯ ವತಿಯಿಂದ ಲೋಬಾನ ಸೇವೆ

ಉಡುಪಿ: ಕೆಳಾರ್ಕಳಬೆಟ್ಟು ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಹುಲಿವೇಶದ ಪರವಾಗಿ ಲೋಬಾನ ಸೇವೆ ನಡೆಯಿತು.

ಈ ವೇಳೆ ಕಾಮಿಡಿ ಕಿಲಾಡಿ ಸ್ಪರ್ಧಾ ವಿಜೇತ ರಾಕೇಶ್‌ ಪೂಜಾರಿ ಹಾಗೂ ಚಿಯರ್ಸ್‌ ಬಾಯ್‌ ಚೇತು ಅವರುಗಳನ್ನು ವ್ಯಾಯಾಮ ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ ನಮ್ಮ ವೀರ ಮಾರುತಿ ವ್ಯಾಯಾಮ ಶಾಲೆಯು ನಮ್ಮ ತುಳುನಾಡಿನ ಹೆಮ್ಮೆಯ ಹುಲಿವೇಷ ಕುಣಿತಕ್ಕೆ ಸ್ಪೂರ್ತಿಯಾಗಿದೆ. ಮುಂದಿನ ದಿನಗಳಲ್ಲಿ ಅನೇಕ ಉನ್ನತ ಯುವ ಪ್ರತಿಭೆಗಳಿಗೆ ವೇದಿಕೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆಯ ಅಣ್ಣಯ್ಯ ಪಾಲನ್‌, ತೆಂಕನಿಡಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಗಾಯತ್ರಿ, ಅಂಜನೇಯ ಮಾತ್ರ ಮಂಡಳಿಯ ಅಧ್ಯಕ್ಷೆ ಪೂರ್ಣಿಮಾ, ಅರ್ಚಕರಾದ ಅಶೋಕ್‌ ಕೋಟ್ಯಾನ್‌, ಸಂದೀಪ್‌ ಪಾಲನ್‌, ಪ್ರಸಾದ್‌ ಪಾಲನ್‌, ಪ್ರಧಾನ ಕಾರ್ಯದರ್ಶಿ ಅನಿಲ್‌ ಪಾಲನ್‌, ತೇಜಸ್‌ ಬಂಗೇರ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯರ್ಶಿ ಅನಿಲ್‌ ಪಾಲನ್‌ ವಂದಿಸಿದರು, ತೇಜಸ್‌ ಬಂಗೇರಾ ಕಾರ್ಯಕ್ರಮ ನಿರೂಪಿಸಿದರು.


Spread the love