ತೈಲ ಬೆಲೆ ಗಗನಕ್ಕೇರಿದರೂ ಅಂಧ ಭಕ್ತರು ಮೋದಿ ಭಜನೆಯಲ್ಲಿ ತೊಡಗಿದ್ದಾರೆ – ಪ್ರಖ್ಯಾತ್ ಶೆಟ್ಟಿ

Spread the love

ತೈಲ ಬೆಲೆ ಗಗನಕ್ಕೇರಿದರೂ ಅಂಧ ಭಕ್ತರು ಮೋದಿ ಭಜನೆಯಲ್ಲಿ ತೊಡಗಿದ್ದಾರೆ – ಪ್ರಖ್ಯಾತ್ ಶೆಟ್ಟಿ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ಸರಣಿ ಪ್ರತಿಭಟನೆಯ ಪ್ರಯುಕ್ತ ನಗರದ ಸಿಟಿ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಧರ್ಮದ ಹೆಸರಿನಲ್ಲಿ ಬಿಜೆಪಿ ಪಕ್ಷವು ಜನರನ್ನು ವಿಭಜಿಸಿ ಕೆಲವರನ್ನು ಅಂಧ ಭಕ್ತರನ್ನಾಗಿಸಿ ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ದರ ಗಗನಕ್ಕೆರಿಸಿದರೂ ಭಕ್ತರು ಇನ್ನೂ ಮೋದಿ ಭಜನೆಯಲ್ಲಿದ್ದಾರೆ. ಪೆಟ್ರೋಲ್ ಮೂಲ ಬೆಲೆ 35 ರೂ ಉಳಿದ ರೂ 65 ಕೇಂದ್ರ ಮತ್ತು ರಾಜ್ಯ ಸರಕಾರಗಳ ತೆರಿಗೆಯನ್ನು ಜನರ ಮೇಲೆ ಹೇರುತ್ತಿದೆ. ಎಂದರು

ಉಡುಪಿ ನಗರಸಭೆಯ ಪ್ರತಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಲ್ಲಿ ಫೀಸ್ ಕಟ್ಟಲು ಒತ್ತಾಯಿಸುತ್ತಿದ್ದಾರೆ ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಮಾರ್ಗದರ್ಶನ ನೀಡಬೇಕು. ಅಧಿಕಾರಕ್ಕೆ ಬರುವ ಮುನ್ನ ಬಡವ ಶ್ರೀಮಂತರೆನ್ನುವ ಭೇಧಭಾವ ಮಾಡದೇ ಆಡಳಿತ ನಡೆಸುವ ಭರವಸೆ ನೀಡಿದ್ದ ಬಿಜೆಪಿ ಈಗ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ, ದಿನಸಿ ಸಾಮಾಗ್ರಿಗಳ ಸತತ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ವಂಚಿಸಿ ವಚನ ಭ್ರಷ್ಟವಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ, ನಾಯಕರಾದ ಗಣೇಶ್ ನೇರ್ಗಿ, ಜನಾರ್ಧನ ಭಂಡಾರ್ಕರ್, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಯತೀಶ್ ಕರ್ಕೇರಾ, ಹಮದ್, ಶರತ್ ಶೆಟ್ಟಿ, ತಾರಾನಾಥ ಸುವರ್ಣ, ಶೇಖರ ಶೆಟ್ಟಿ, ಸುಹಾಸ್ ಶೇಟ್, ನವೀನ್ ಸುವರ್ಣ ಬನ್ನಂಜೆ, ಪ್ರಜ್ವಲ್ ಅಂಚನ್, ಪ್ರದೀಪ್ ಅಂಚನ್, ಗಣೇಶ್ ದೇವಾಡಿಗ, ಸಾಯಿರಾಜ್ ಕೋಟ್ಯಾನ್, ಪ್ರಶಾಂತ್ ಶಿರಿಬೀಡು ಹಾಗೂ ಇತರರು ಉಪಸ್ಥಿತರಿದ್ದರು.


Spread the love