ತ್ರಾಸಿ ಬೀಚ್ ನಲ್ಲಿ ಗಾಂಜಾ ಸೇವನೆ ಆರೋಪ – ನಾಲ್ವರು ವಶಕ್ಕೆ

Spread the love

ತ್ರಾಸಿ ಬೀಚ್ ನಲ್ಲಿ ಗಾಂಜಾ ಸೇವನೆ ಆರೋಪ – ನಾಲ್ವರು ವಶಕ್ಕೆ

ಕುಂದಾಪುರ: ತ್ರಾಸಿ ಬೀಚ್ ನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ಕು ಮಂದಿ ಯುವಕರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಪಾದಿತ ಯುವಕರನ್ನು ತ್ರಾಸಿ ನಿವಾಸಿ ತಕ್ರೀಂ (22), ಗಂಗೊಳ್ಳಿ ನಿವಾಸಿ ಜಯಂತ (20), ಆನಂದ ರಾಜ್ (25), ಮರ್ವಿನ್ (20) ಎಂದು ಗುರುತಿಸಲಾಗಿದೆ.

ತ್ರಾಸಿ ಬೀಚ್ ನಲ್ಲಿ ಕೆಲವೊಂದು ಹುಡುಗರು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಗಂಗೊಳ್ಳಿ ಪಿ ಎಸ್ ಐ ಅವರಿಗೆ ಖಚಿತ ಮಾಹಿತಿ ಬಂದಿದ್ದು ಸ್ಥಳಕ್ಕೆ ಭೇಟಿ ನೀಡಿ ಆಪಾದಿತರನ್ನು ವಶಕ್ಕೆ ಕೆ.ಎಂ.ಸಿ ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.

ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love