ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ

Spread the love

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ತಾತ್ಕಾಲಿಕ ನಿರ್ಬಂಧಕಾಜ್ಞೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಹಾಲಿ ಸಮಿತಿಯ ವಿರುದ್ಧ ಮಂಗಳೂರಿನ ನ್ಯಾಯಾಲಯ ತಾತ್ಕಾಲಿಕ ನಿರ್ಬಂಧ ಕಾಜ್ಞೆಯನ್ನು ಕೋರಿ ಸಲ್ಲಿಸಿರುವ 4 ನೇ ಮಧ್ಯಂತರ ಅರ್ಜಿಯನ್ನ ಪುರ ಸ್ಕರಿಸಿ ನಾಲ್ಕನೆ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಮಂಗಳೂರು ಇವರು ತೀರ್ಪು ನೀಡಿದ್ದಾರೆ.

ಸಂಘಟನೆಯ ಕಾರ್ಯದರ್ಶಿ ಐವಾನ್ ಪತ್ರಾವೋ ಸೇರಿದಂತೆ ಇತರ ಪದಾಧಿಕಾರಿ ಗಳ ವಿರುದ್ಧ ಸಂಘಟನೆಯ ಸದಸ್ಯ ರಾದ ದೀಪಕ್ ಕುಮಾರ್, ಸಂತೋಷ್ ಕುಮಾರ್ ಶೆಟ್ಟಿ ನ್ಯಾಯಾಲಯಕ್ಕೆ ದೂರು ನೀಡಿ ಸದ್ರಿ ಸಂಘಟನೆ ಸಮರ್ಪಕ ವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.ಹಾಲಿ ಸಮಿತಿ ಕಾನೂನು ಬದ್ಧವಾಗಿ ಆಯ್ಕೆ ಯಾಗಿರುವುದಿಲ್ಲ ಎಂದು ನೀಡಿದ ದೂರಿನ ಹಿನ್ನೆಲೆಯಲ್ಲಿ, ಹಾಲಿ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ಸಂಬಂಧಿಸಿದಂತೆ ಯಾವುದೇ ಸಾಮಾನ್ಯ ಸಭೆ ಮಾಡದಂತೆ ಹಾಗೂ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆ, ಬ್ಯಾಂಕ್‌ ಮುಂತಾದುವುಗಳ ಮುಂದೆ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಪರವಾಗಿ ಭಾಗವಹಿಸದಂತೆ ಹಾಗೂ ಸರ್ಕಾರದಿಂದ ಹಾಗೂ ಸಾರ್ವಜನಿಕರಿಂದ ಯಾವುದೇ ರೀತಿಯಲ್ಲಿ ವಂತಿಗೆಗಳನ್ನು ಸಂಗ್ರಹ ಮಾಡದಂತೆ ತಾತ್ಕಾಲಿಕ ನಿರ್ಬಂಧಕಾಜ್ಞೆ ನೀಡಲಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಾದಿಗಳ ಪರವಾಗಿ ನ್ಯಾಯ ವಾದಿ ಎಸ್.ಕೆ.ಉಳ್ಳಾಲ್ ನ್ಯಾಯಾಲಯದಲ್ಲಿವಾದ ಮಂಡಿಸಿದರು.


Spread the love