ದಕ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ‘ಕ್ಯಾಂಪಸ್ ಗೇಟ್ ಮೀಟ್’ ಪೋಸ್ಟರ್ ಅಭಿಯಾನ

Spread the love

ದಕ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ‘ಕ್ಯಾಂಪಸ್ ಗೇಟ್ ಮೀಟ್’ ಪೋಸ್ಟರ್ ಅಭಿಯಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ‘ಕ್ಯಾಂಪಸ್ ಗೇಟ್ ಮೀಟ್’ ಪೋಸ್ಟರ್ ಅಭಿಯಾನವನ್ನು ಪಾಂಡೇಶ್ವರದ ಶ್ರೀನಿವಾಸ್ ಕಾಲೇಜಿನಲ್ಲಿ ಸೋಮವಾರ ನಡೆಸಲಾಯಿತು.

ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ನ ಅಧ್ಯಕ್ಷರಾದ ಸವಾದ್ ಸುಳ್ಯ ಮಾತನಾಡಿ, ಈ ಅಭಿಯಾನದಲ್ಲಿ ಎನ್. ಎಸ್.ಯು.ಐ ಪದಾಧಿಕಾರಿಗಳು ವಿವಿಧ ಕಾಲೇಜ್ ಕ್ಯಾಂಪಸ್ ಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಹೋರಾಟದ ಮುಖಾಂತರ ಬಗೆಹರಿಸಲಿರುವರು. ಅಲ್ಲದೆ, ಸ್ಕಾಲರ್ ಶಿಪ್, ಬಸ್ ಪಾಸ್, ಕಾಲೇಜು ಶುಲ್ಕ, ರ್ಯಾಗಿಂಗ್, ಮಾದಕ ದ್ರವ್ಯದ ಬಗ್ಗೆ ಜನ ಜಾಗೃತಿ ನಡೆಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಎನ್.ಎಸ್.ಯು.ಐ ನ ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ, ಮಂಗಳೂರು ನಗರ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಶೇಖ್ ಅಫ್ಶನ್, ಶ್ರೀನಿವಾಸ್ ಕಾಲೇಜಿನ ಎನ್.ಎಸ್.ಯು.ಐ ಘಟಕದ ಅಧ್ಯಕ್ಷರಾದ ತಮೀಝ್ ಅಳಕೆಮಜಲು, ಉಡುಪಿ ಜಿಲ್ಲಾ ಎನ್.ಎಸ್.ಯು.ಐ ನ ಪ್ರಧಾನ ಕಾರ್ಯದರ್ಶಿ ಮಸೂದ್, ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ ನ ಸಂಯೋಜಕರಾದ ನಜೀಬ್ ಮಂಚಿ, ಶ್ರೀನಿವಾಸನ್ ಕಾಲೇಜಿನ ಎನ್.ಎಸ್.ಯು.ಐ ಘಟಕದ ಸದಸ್ಯರಾದ ಶ್ರೇಯಸ್, ಅ್ಯಸ್ಟನ್, ದಿವ್ಯ ಪ್ರಜ್ವಲ್, ವಿನೋದ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.


Spread the love