ದಕ ಜಿಲ್ಲೆಯಲ್ಲಿ ಮುಂದುವರೆದ ಅನೈತಿಕ ಪೊಲೀಸ್ ಗಿರಿ – ಧರ್ಮಸ್ಥಳದಲ್ಲಿ ಆಟೋ ಚಾಲಕನಿಗೆ ಹಲ್ಲೆ

Spread the love

ದಕ ಜಿಲ್ಲೆಯಲ್ಲಿ ಮುಂದುವರೆದ ಅನೈತಿಕ ಪೊಲೀಸ್ ಗಿರಿ – ಧರ್ಮಸ್ಥಳದಲ್ಲಿ ಆಟೋ ಚಾಲಕನಿಗೆ ಹಲ್ಲೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ಮುಂದುವರೆದಿದ್ದು, ಧರ್ಮಸ್ಥಳದಲ್ಲಿ ಮುಸ್ಲಿಂ ಆಟೋ ಚಾಲಕನಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಉಜಿರೆ ನಿವಾಸಿ ಮೊಹಮ್ಮದ್ ಆಶಿಕ್ (22) ಎಂದು ಗುರುತಿಸಲಾಗಿದೆ.
ಆಟೋದಲ್ಲಿ ಹಿಂದು ಹುಡುಗಿ ಕೂರಿಸಿಕೊಂಡು ಹೋಗುತ್ತಿದ್ದಾಗ ಧರ್ಮಸ್ಥಳ ದ್ವಾರದ ಬಳಿಯ ಬಸ್ ನಿಲ್ದಾಣದಲ್ಲಿ ಆಶಿಕ್ ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love