ದಕ ಜಿಲ್ಲೆಯ ಐವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

Spread the love

ದಕ ಜಿಲ್ಲೆಯ ಐವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು, ಸಿಬಂದಿ ಸಹಿತ 2020 ನೇ ಸಾಲಿನಲ್ಲಿ ರಾಜ್ಯದ 115 ಮಂದಿಗೆ ಮುಖ್ಯಮಂತ್ರಿಯ ಪದಕ ಘೋಷಿಸಲಾಗಿದ್ದು ಆ ಪೈಕಿ ದಕ ಜಿಲ್ಲೆಯ ಐವರಿಗೆ ಪದಕ ಲಭಿಸಿದೆ.

ಮಂಗಳೂರು ಸಿಸಿಬಿ ವಿಭಾಗದ ಹೆಡ್ ಕಾನ್ಸ್ ಟೇಬಲ್ ಅಬ್ದುಲ್ ಜಬ್ಬಾರ್, ಪಾಂಡೇಶ್ವರ ಠಾಣೆಯ ಹೆಡ್ ಕಾನ್ ಸ್ಟೇಬಲ್ ನಯನಾ, ಬಂದರು ಠಾಣೆಯ ಹೆಡ್ ಕಾನ್ಸ್ ಟೇಬಲ್ ಸುಜನ್ ಶೆಟ್ಟಿ, ದಕ ಜಿಲ್ಲಾ ಸಿಡಿಆರ್ ವಿಭಾಗದ ಪೊಲೀಸ್ ಕಾನ್ಸ್ ಟೇಬಲ್ ಸಂಪತ್ ಕುಮಾರ್, ಉಪ್ಪಿನಂಗಡಿ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಪ್ರವೀಣ್ ರೈ ಅವರು ಕರ್ತವ್ಯದ ವೇಳೆ ತೋರಿದ ಸಾಧನೆಗಾಗಿ ಮುಖ್ಯಮಂತ್ರಿ ಪದಕ ಘೋಷಿಸಲಾಗಿದೆ.


Spread the love