ದತ್ತ ಜಯಂತಿ; ಗೋರಿಗಳು ಎಷ್ಟು ಮುಖ್ಯವೋ ಅದಕ್ಕಿಂತ ನನ್ನ ಪೊಲೀಸರ ಜೀವದ ರಕ್ಷಣೆ ಹೆಚ್ಚು ಮುಖ್ಯ ; ಅಣ್ಣಾಮಲೈ ಖಡಕ್ ಮಾತು
ಚಿಕ್ಕಮಗಳೂರು: ಬಾಬಾಬುಡಾನ್ ಗಿರಿಯಲ್ಲಿ ಇರುವ ಗೋರಿಗಳು ಎಷ್ಟು ಮುಖ್ಯವೋ ನನಗೆ ನನ್ನ ಪೊಲೀಸರು ಅಷ್ಟೆ ಮುಖ್ಯ. ಗೋರಿಗಳಿಗೆ ಹಾನಿಯಾದರೆ ಅದನು ಸರಿಪಡಿಸಬಹುದು ಆದರೆ ನನ್ನ ಪೋಲಿಸರ ಜೀವಕ್ಕೆ ಹಾನಿಯಾದರೆ ಅವರ ಮನೆಯವರಿಗೆ ಏನು ಹೇಳುವುದು ಎಂದು ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ತನ್ನ ಸಿಬಂದಿಗಳ ಕಾಳಜಿಯ ಬಗ್ಗೆ ಸಾರ್ವಜಿನಕರಿಗೆ ಖಡಕ್ ಸಂದೇಶ ನೀಡಿದ್ದಾರೆ.
ಇತ್ತೀಚೆಗೆ ಚಿಕ್ಕಮಗಳೂರಿನ ಬಾಬಾಬುಡಾನ್ ಗಿರಿಯಲ್ಲಿ ನಡೆದ ದತ್ತ ಜಯಂತಿ ಆಚರಣೆಯ ವೇಳೆ ಗೋರಿಗಳಿಗೆ ಹಾನಿಯಾಗಲು ಪೋಲಿಸರ ವೈಫಲ್ಯವೇ ಕಾರಣ ಎಂದು ಆರೋಪ ಮಾಡಿದವರಿಗೆ ಆಣ್ಣಾಮಲೈ ಅವರು ತಮ್ಮ ಎಂದಿನ ಶೈಲಿಯ ಖಡಕ್ ಉತ್ತರ ನೀಡಿದ್ದಾರೆ.
ದತ್ತಜಯಂತಿಯ ಸಮಯದಲ್ಲಿ ಜಿಲ್ಲಾ ಪೋಲಿಸ್ ಇಲಾಖೆಯಿಂದ ಸಂಪೂರ್ಣವಾದ ಬಂದೋಬಸ್ತು ಹಾಕಲಾಗಿತ್ತು. ಪ್ರತಿವರ್ಷದಂತೆ ಈ ವರ್ಷವೂ ಕೂಡ 2000 ದಷ್ಟು ಪೋಲಿಸ್ ಬಂದೋಬಸ್ತನ್ನು ಹಾಕಲಾಗಿತ್ತು. ಬಂದೋಬಸ್ತು ಮಾಡುವುದರಲ್ಲಿ ಎಲ್ಲಿಯೂ ಲೋಪ ಆಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಉದಾಹರಣೆಗಾಗಿ ಎಲ್ಲ ಭದ್ರತೆ ಸರಿಯಾಗಿದ್ದರೂ ಕೂಡ ಅಮೇರಿಕ, ರಷ್ಯಾದ ಅಧ್ಯಕ್ಷರು ಯಾಕೆ ಸಾವೀಗೀಡಾದರು ಎಂದು ಪ್ರಶ್ನಿಸಿದ ಅಣ್ಣಾಮಲೈ, 99% ಸರಿಯಾಗಿದ್ದರೂ ಕೂಡ 1 % ತಪ್ಪಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ಮನೆಯಲ್ಲಿಯೂ ಸಹ ತಪ್ಪಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಆದರೆ ಪೋಲಿಸ್ ಇಲಾಖೆ ಪಶ್ಚಾತ್ತಾಪ ವ್ಯಕ್ತಪಡಿಸಿದ ಕಾರಣ ಎಂದರೆ ಯಾವುದೇ ಸಮುದಾಯಕ್ಕೂ ಕೂಡ ನೋವಾಗಬಾರದು ಎಂಬುದು ನಮ್ಮ ಉದ್ದೇಶ ಅಷ್ಟೇ. ನನ್ನ ಪ್ರಕಾರ ದತ್ತಜಯಂತಿಯ ಭದ್ರತೆ ಸಂಪೂರ್ಣ ಸರಿಯಾಗಿತ್ತು ಗೋರಿಯ ಬಳಿ ಧಾಳಿಯಾದಲ್ಲಿ ಎಷ್ಟು ಗೋರಿಯ ರಕ್ಷಣೆ ಮುಖ್ಯವೋ ಅಷ್ಟೇ ಮಟ್ಟಿನಲ್ಲಿ ನನ್ನ ಪೋಲಿಸರ ರಕ್ಷಣೆಯೂ ನನಗೆ ಮುಖ್ಯ. 10 ಜನ ಪೋಲಿಸ್ ಅಲ್ಲಿದ್ದು 3000 ಜನ ಹೊಡೆಯಲು ಹೋದಾಗ ಅವರನ್ನು ರಕ್ಷಣೆ ಮಾಡುವ ಜವಾಬ್ದಾರಿ ಪೋಲಿಸ್ ವರಿಷ್ಠಾಧಿಕಾರಿಯಾಗಿ ನನಗಿದೆ. ಪೋಲಿಸರ ರಕ್ಷಣೆ ನನಗೆ ಮೊದಲಾಗಿದ್ದು ಗೋರಿಯ ರಕ್ಷಣೆ ನನ್ನ ಎರಡನೇ ಆದ್ಯತೆ ಗೋರಿಗೆ ಏನಾದರೂ ಆದರೆ ಅದನ್ನು ದುರಸ್ತಿಗೊಳಿಸಬಹುದು ಆದೇ ಪೋಲಿಸರಿಗೆ ಏನಾದರೂ ಆದರೆ ಅವರ ಮನೆಯವರಿಗೆ ಏನು ಉತ್ತರ ನೀಡಲಿ ಎಂದು ಪ್ರಶ್ನಿಸಿದರು. ತಾನು ತಾಳ್ಮೆಯಿಂದ ಮಾತನಾಡುತ್ತಿದ್ದ ಅದರ ಲಾಭ ಪಡೆದು ಏನೇನು ಮಾತನಾಡಿದರೆ ಅದನ್ನು ಸಹಿಸಲ್ಲ ಎಂದ ಅಣ್ಣಾಮಲೈ ಅವರು ಇನ್ನೊಂದು ಗೋರಿಯ ಬಳಿಯಿದ್ದ ಪೋಲಿಸರು ಅಲ್ಲಿಂದ ಹಾರಿ ಬಂದು ಹಾನಿಯಾದ ಗೋರಿಯ ಬಳಿಯ ಪೋಲಿಸರನ್ನು ರಕ್ಷಣೆ ಮಾಡಿದ್ದಾರೆ ಅದು ಅವರ ಕರ್ತವ್ಯ ಕೂಡ. ಗೋರಿ ಹಾನಿಗೊಳಿಸಿದ 7 ಜನರಲ್ಲಿ 6 ಮಂದಿಯನ್ನು ಬಂಧಿಸಿದ್ದಾರೆ. ಎಲ್ಲೋ ತಪ್ಪಾಗಿರುವ ವಿಷಯವನ್ನು ಗಮನದಲ್ಲಿಟ್ಟು ಮುಂದಿನ ವರ್ಷ ಸರಿಪಡಿಸಿಕೊಳ್ಳಲಾಗುವುದು ಎಂದರು.