ದನ ಕಟ್ಟಿ ಹಾಕುವ ವಿಚಾರದಲ್ಲಿ ಮಗನನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

Spread the love

ದನ ಕಟ್ಟಿ ಹಾಕುವ ವಿಚಾರದಲ್ಲಿ ಮಗನನ್ನು ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

ಮಂಗಳೂರು: ಸಾಕು ದನಗಳನ್ನು ಹೊರಗಡೆ ಕಟ್ಟಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ತಂದೆಯೇ ತನ್ನ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಜಪ್ಪಿನಮೊಗರು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕೊಪ್ಪರಿಗೆಗುತ್ತು ನಿವಾಸಿ ಸ್ವಾಮೀತ್ ಶೆಟ್ಟಿ (25 ವ) ಎಂಬವರು ಸುಟ್ಟ ಗಾಯಗೊಂದಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಪಿ ವಿಶ್ವನಾಥ ಶೆಟ್ಟಿ (52 ವ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಸುಮಾರು 11:30 ಗಂಟೆಗೆ ಜಪ್ಪಿನಮೊಗರು ಗ್ರಾಮದ ಕೊಪ್ಪರಿಗೆಗುತ್ತು ಎಂಬಲ್ಲಿ ಸಾಕುದನಗಳನ್ನು ಹೊರಗಡೆ ಕಟ್ಟಿಹಾಕಿದ್ದ ಬಗ್ಗೆ ಸ್ವಾಮೀತ್ ಶೆಟ್ಟಿಯ ತಂದೆ ವಿಶ್ವನಾಥ ಶೆಟ್ಟಿರವರು ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದಿದ್ದಾರೆ. ಬಳಿಕ ಮನೆಯ ಒಳಗಡೆ ಬಂದು ಬಾಗಿಲು ಮುಚ್ಚಿ, ಚಿಲಕ ಹಾಕಿ ಪ್ಲಾಸ್ಟಿಕ್ ಕ್ಯಾನ್ ನಲ್ಲಿದ್ದ ಪೆಟ್ರೊಲ್ ನ್ನು ಮಗನ ಮೈ ಮೇಲೆ ಸುರಿದು ಅಲ್ಲಿಯೇ ಇದ್ದ ಸಿಗರ್ ಲೈಟರ್ ನಿಂದ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.


Spread the love