ದನ ಕಳ್ಳತನ – ಐವರು ಆರೋಪಿಗಳ ಬಂಧನ

Spread the love

ದನ ಕಳ್ಳತನ – ಐವರು ಆರೋಪಿಗಳ ಬಂಧನ

ಮಂಗಳೂರು: ಮನೆಯಲ್ಲಿ ಕಟ್ಟಿಹಾಕಿದ್ದ ದನವನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಗ್ಲೆಗುಡ್ಡ ನಿವಾಸಿ ಮಹಮ್ಮದ್ ಅಶ್ಫಕ್ ಯಾನೆ ಶಮೀರ್ (22), ಗುರುಪುರ ನಿವಾಸಿ ಅಜರುದ್ದೀನ್ ಅಜರ್ (31), ಚೆಲ್ಲಿಗುಡ್ಡೆ ನಿವಾಸಿ ಸುಹೈಲ್ (19), ಬಜಾಲ್ ನಿವಾಸಿ ಮೊಹಮ್ಮದ್ ಅಫೀದ್ (25), ಶಾಹಿದ್ (19) ಎಂದು ಗುರುತಿಸಲಾಗಿದೆ.

ಬಜಾಲ್ ನಿವಾಸಿ ಅಶ್ವೀನ್ ಎಂಬವರ ಮನೆಯಿಂದ ಜುಲೈ 21 ರಂದು ಕೊಟ್ಟಿಯಲ್ಲಿದ್ದ ಸುಮಾರು 40000 ರೂಪಾಯಿ ಮೌಲ್ಯದ ದನ ಕಳ್ಳತನವಾದ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು ಕತ್ತಿ ಹಗ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ


Spread the love