ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – ಪಿಎಸ್ ಐ ಅರ್ಜುನ್ ಹೊರಕೇರಿ ಅಮಾನತು

Spread the love

ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ – ಪಿಎಸ್ ಐ ಅರ್ಜುನ್ ಹೊರಕೇರಿ ಅಮಾನತು

ಚಿಕ್ಕಮಗಳೂರು: ಜಿಲ್ಲೆಯ ಗೋಣಿಬೀಡು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅರ್ಜುನ್ ಹೊರಕೇರಿ ರವರು ಓರ್ವ ದಲಿತ ಯುವಕನನ್ನು ಕಾನೂನು ಬಾಹಿರವಾಗಿ ಬಂಧಿಸಿ ಠಾಣೆಗೆ ಕರೆತಂದು ಹಲ್ಲೆ ನಡೆಸಿರುವುದಲ್ಲದೇ, ಠಾಣೆಯಲ್ಲಿರುವ ಇನ್ನೋರ್ವ ಅಪರಾದಿಯ ಮೂತ್ರವನ್ನು ಕುಡಿಸಿ ಹಿಂಸೆ ನೀಡಿರುವ ಆರೋಪದಲ್ಲಿ ಇಲಾಖಾ ಶಿಸ್ತುಕ್ರಮ ಬಾಕಿಯಿರಿಸಿ ಸೇವೆಯಿಂದ ಅಮಾನತ್ತು ಗೊಳಿಸಿದ್ದಾರೆ.

ಜಿಲ್ಲೆಯ ಗೋಣಿಬೀಡು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅರ್ಜುನ್ ಹೊರಕೇರಿ ರವರು ಓರ್ವ ದಲಿತ ಯುವಕನನ್ನು ಕಾನೂನು ಬಾಹಿರವಾಗಿ ಬಂಧಿಸಿ ಠಾಣೆಗೆ ಕರೆತಂದು ಹಲ್ಲೆ ನಡೆಸಿರುವುದಲ್ಲದೇ, ಠಾಣೆಯಲ್ಲಿರುವ ಇನ್ನೋರ್ವ ಅಪರಾದಿಯ ಮೂತ್ರವನ್ನು ಕುಡಿಸಿ ಹಿಂಸೆ ನೀಡಿರುವ ಕುರಿತು ನೀಡಿದ ದೂರಿನನ್ವಯ ಪೊಲೀಸ್ ಉಪನಿರೀಕ್ಷಕರ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ರವರು ಗೋಣಿಬೀಡು ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅರ್ಜುನ್ ಹೊರಕೇರಿ ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ಶಿಸ್ತುಕ್ರಮ ಬಾಕಿಯಿರಿಸಿ ಸೇವೆಯಿಂದ ಅಮಾನತ್ತು ಗೊಳಿಸಿರುತ್ತಾರೆ.

ಪ್ರಕರಣದ ನ್ಯಾಯೋಚಿತ ಹಾಗೂ ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಪ್ರಕರಣದ ಮುಂದಿನ ತನಿಖೆಯನ್ನು ಸಿಐಡಿ ಘಟಕಕ್ಕೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಮಹಾನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ರವರು ಸದರಿ ಪ್ರಕರಣದ ಕುರಿತು ವಿಪರವಾದ ಪ್ರಾಥಮಿಕ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ, ದಕ್ಷಿಣ ಕನ್ನಡ ಜಿಲ್ಲೆರವರಿಗೆ ಸೂಚಿಸಿರುತ್ತಾರೆ.


Spread the love