
ದಶಪಥ ಹೆದ್ದಾರಿ ಟೋಲ್ ಹೆಚ್ಚಳ ವಾಪಸ್
ಬೆಂಗಳೂರು: ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇಲ್ಲಿನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನ ಟೋಲ್ ದರ ಹೆಚ್ಚಳವನ್ನು ಒಂದೇ ದಿನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಪಸ್ಸು ಪಡೆಯಲಾಗಿದೆ.
ಟೋಲ್ ದುಪ್ಪಟ್ಟು ದರ ಪ್ರಕಟಿಸಿದ್ದ ಪ್ರಾಧಿಕಾರದ ಏ.1ರಿಂದ ಹೆಚ್ಚುವರಿ ಹಣ ಪಾವತಿಗೆ ಸೂಚಿಸಿತ್ತು. ಆದರೆ, ಇದಕ್ಕೆ ಭಾರೀ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಜತೆಗೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಿಸಿ ತಟ್ಟುವ ಭಯದಲ್ಲಿ ಟೋಲ್ ದರ ಹೆಚ್ಚಳ ಆದೇಶವನ್ನು ಒಂದೇ ದಿನದಲ್ಲಿ ಪ್ರಾಧಿಕಾರ ವಾಪಸ್ ಪಡೆದಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ಸಂಚಾರಕ್ಕೆ ಏಪ್ರಿಲ್ 1ರಿಂದ ಶೇ.22 ರಷ್ಟು ಟೋಲ್ ದರ ಹೆಚ್ಚಿಸಿತ್ತು., ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಿರುವುದಾಗಿ ಪ್ರಾಧಿಕಾರ ಘೋಷಿಸಿತ್ತು. ದಿಢೀರ್ ಟೋಲ್ ದರ ಹೆಚ್ಚಳಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲಿ ವಾಪಸ್ ಪಡೆದಿದೆ.
ಪರಿಷ್ಕೃತ ದರ ಪಟ್ಟಿ ದರವು ಕಾರು/ ವ್ಯಾನ್/ ಜೀಪ್ ಏಕಮುಖ ಸಂಚಾರ 165 ರೂ, (30 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 250 ರೂ.(45 ರೂ ಏರಿಕೆ), ಲಘು ವಾಹನಗಳು/ ಮಿನಿ ಬಸ್-270 ರೂ (50 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 405 ರೂ (75 ರೂ ಏರಿಕೆ), ಟ್ರಕ್/ ಬಸ್/ ಎರಡು ಆಕ್ಸೆಲ್ ವಾಹನ- 565 ರೂ(165 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 850 ರೂ(160 ರೂ ಏರಿಕೆ).
ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು- ಏಕಮುಖ ಸಂಚಾರ 615 ರೂ(115 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 925 ರೂ(225 ರೂ ಏರಿಕೆ), ಭಾರಿ ಕಟ್ಟಡ ನಿರ್ಮಾಣ ವಾಹನಗಳು/ ಆರ್ಥ್ ಮೂವರ್ಸ್ /4-6 ಆಕ್ಸೆಲ್ ವಾಹನಗಳು ಏಕಮುಖ ಸಂಚಾರ 885 ರೂ(165 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 1,330 ರೂ,(250 ರೂ ಏರಿಕೆ), 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳಿಗೆ ಏಕಮುಖ ಸಂಚಾರ 1,080 ರೂ,(200 ರೂ ಏರಿಕೆ), ದ್ವಿಮುಖ ಸಂಚಾರಕ್ಕೆ 1,620 ರೂ(305 ರೂ ಏರಿಕೆ) ಮಾಡಿತ್ತು. ಆದರೆ ದರ ಹೆಚ್ಚಳ ಆದೇಶ ಹಿಂಪಡೆದಿದ್ದರಿಂದ ಜನ ನೆಮ್ಮದಿಯುಸಿರು ಬಿಟ್ಟಿದ್ದಾರೆ.