ದಸರಾ ಆನೆ ಕಾಲಿಗೆ ಗುಂಡು ಹಾರಿಸಿದ ಆರೋಪಿ ಬಂಧನ

Spread the love

ದಸರಾ ಆನೆ ಕಾಲಿಗೆ ಗುಂಡು ಹಾರಿಸಿದ ಆರೋಪಿ ಬಂಧನ

ಮೈಸೂರು: ಮೈಸೂರು ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತು ಗಮನಸೆಳೆದಿದ್ದ ದಸರಾ ಆನೆ ಬಲರಾಮನಿಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಆನೆ ಚೌಕರು ಭಾಗದಲ್ಲಿ  ನಡೆದಿದ್ದು ಆರೋಪಿಯನ್ನು ಕೋವಿ ಸಹಿತ ಬಂಧಿಸಲಾಗಿದೆ.

ಅಳಲೂರು ಗ್ರಾಮದ ನಿವಾಸಿ  ಅಚ್ಚಪ್ಪ ಎಂಬುವರ ಪುತ್ರ ಸುರೇಶ  ಬಂಧಿತ. ಭೀಮನಕಟ್ಟೆ ಸಾಕಾನ ಶಿಬಿರದಲ್ಲಿದ್ದ ಬಲರಾಮನನ್ನು ಡಿ.15ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಆನೆ ಚೌಕರು ಭಾಗದಲ್ಲಿ ಮೇಯಲು ಬಿಡಲಾಗಿತ್ತು. ಕಾಡಿನಲ್ಲಿ ಮೇಯುತ್ತಾ ಹೋದ ಬಲರಾಮ  ರಾತ್ರಿ 9 ಗಂಟೆ ವೇಳೆಯಲ್ಲಿ ಸರ್ವೇ ನಂ-27ರ ಜಮೀನಿನತ್ತ ತೆರಳಿದ್ದು ಈ ಸಂದರ್ಭ‍ ಸುರೇಶ್ ಎಂಬಾತ ಒಂಟಿ ನಳಿಕೆಯ ಕೋವಿಯಿಂದ ಬಲಭಾಗದ ಮುಂಗಾಲಿಗೆ ಗುಂಡು ಹಾರಿಸಿದ್ದು ಅದೃಷ್ಟ ವಸಾತ್ ಆನೆಗೆ ಯಾವುದೇ ಪ್ರಾಣಪಾಯವು ಸಂಭವಿಸಿಲ್ಲ.

ಸ್ಥಳಕ್ಕೆ ವನ್ಯಜೀವಿ  ವೈದಿಕೀಯ ಅಧಿಕಾರಿಗಳಾದ ಡಾ. ರಮೇಶ್ ರವರ ತಂಡ ಭೇಟಿ ನೀಡಿ ಆನೆಗೆ ಚಿಕಿತ್ಸೆ ನೀಡುತ್ತಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯವ್ಯಸಗಿದ ಆರೋಪಿ ಸುರೇಶ ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆ ಕೋವಿಯನ್ನು ಹಾಗೂ ಬಳಸಿದ ಕಾಡತೂಸುಗಳೊಂದಿಗೆ ಇಲಾಖಾ ಪರ ಅಮಾನತು ಪಡಿಸಿಕೊಳ್ಳಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ರೀತಿಯ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಆರೋಪಿಯ ವಿರುದ್ಧ WLOR Nal,222-23 ರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ  ಎಂದು ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಅವರು ತಿಳಿಸಿದ್ದಾರೆ.


Spread the love