ದಸರಾ ಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ಕೆ ಚಾಲನೆ

Spread the love

ದಸರಾ ಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ಕೆ ಚಾಲನೆ

ಮೈಸೂರು: ಮೈಸೂರು ದಸರಾಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ಆರಂಭವಾಗಿದ್ದು, ಅದರಂತೆ ಪ್ರಮುಖವಾಗಿರುವ ಕುಸ್ತಿ ಪಂದ್ಯಾವಳಿಯಲ್ಲಿ ತೊಡೆ ತಟ್ಟಲು ಪೈಲ್ವಾನರ ಸಿದ್ದರಾಗಿದ್ದು, ಈ ಸಂಬಂಧ ಜೋಡಿ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ನಗರದ ವಸ್ತುಪ್ರದರ್ಶನ ಪ್ರಾಧಿಕಾರದ ಕಾಳಿಂಗರಾವ್ ಭವನದಲ್ಲಿ ಕುಸ್ತಿಪಟುಗಳಿಗೆ ಬೆನ್ನುತಟ್ಟುವ ಮೂಲಕ ಜೋಡಿ ಕಟ್ಟುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಜೋಡಿ ಕಟ್ಟುವ ಕಾರ್ಯಕ್ಕೆ ನಗರವೂ ಸೇರಿದಂತೆ ನಾಡಿನ ವಿವಿಧ ಗರಡಿ ಮನೆಗಳಿಂದ ಮಹಿಳೆಯರೂ ಸೇರಿದಂತೆ 300ಕ್ಕೂ ಹೆಚ್ಚು ಪೈಲ್ವಾನರು ಆಗಮಿಸಿದ್ದು ವಿಶೇಷವಾಗಿತ್ತು. ಅರ್ಜಿ ಹಾಗೂ ಪೂರಕ ದಾಖಲೆಗಳನ್ನು ನೀಡಿ ಪಂದ್ಯವಾಳಿಗೆ ಸೇರ್ಪಡೆಗೊಂಡರು. ಮಹಿಳೆಯರು, ಪುರುಷರು, ಯುವಕರು, ಚಿಣ್ಣರಿಗೆ ಪ್ರತ್ಯೇಕವಾಗಿ ಜೋಡಿ ಕಟ್ಟಲಾಯಿತು. ನಂತರ ಚಿಣ್ಣರು, ಪೈಲ್ವಾನರು ಗದೆ ತಿರುಗಿಸುವ, ಕಲ್ಲು ಗುಂಡು ಎತ್ತುವ, ದಂಡ ಹೊಡೆಯುವ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗಿಯಾದರು.

ವಯಸ್ಸು, ತೂಕ, ದೇಹದಾರ್ಢ್ಯತೆ, ವೈಯಕ್ತಿಕ ಮಾಹಿತಿಗಳ ಆಧಾರದ ಮೇಲೆ ಹಿರಿಯ ಉಸ್ತಾದ್‌ಗಳು ಒಟ್ಟು 140 ಜೋಡಿಗಳನ್ನು ಕಟ್ಟಿದರು. ಇದರಲ್ಲಿ 15 ಮಹಿಳಾ ಕುಸ್ತಿ ಪಟುಗಳು ಮತ್ತು 20 ಪುಟಾಣಿ ಪೈಲ್ವಾನರ ಜೋಡಿಗಳು ಇದ್ದವು.

ಇದೇ ಸಂದರ್ಭ ವಿವಿಧ ಸ್ಪರ್ಧೆಗಳು ನಡೆದಿದ್ದು, ಪುರುಷರ ವಿಭಾಗ ದಂಡ ಹೊಡೆಯುವ ಸ್ಪರ್ಧೆಯಲ್ಲಿ ಶಾಹೀದ್ ಪಾಷ್ (ಪ್ರ-51 ದಂಡ), ಮೊಹ್ಮದ್ ಸಾಕೀಬ್ (ದ್ವಿ-46 ದಂಡ), ಸೈಯದ್ ಹುಸೇನ್ (ತೃ-43 ದಂಡ). ಗದೆ ತಿರುಗಿಸುವ ಸ್ಪರ್ಧೆಯಲ್ಲಿ ಸಲ್ಮಾನ್ ಖಾನ್ (ಪ್ರ-97 ಬಾರಿ), ಯಶವಂತ (ದ್ವಿ-82), ಯುನಿಸ್ ಖಾನ್ (ತೃ-80). ದಂಡ ಸರ್ಪೋರ್ಟ್ ಸ್ಪರ್ಧೆಯಲ್ಲಿ ಆಕಾಶ್ (ಪ್ರ), ವಿಕಾಸ (ದ್ವಿ), ಸೈಯದ್ ಹುಸೇನ್ (ತೃ). ಬಸ್ಕಿ ಹೊಡೆಯುವ ಸ್ಪರ್ಧೆ ಮಕ್ಕಳ ವಿಭಾಗದಲ್ಲಿ ನಿಖಿಲ್ (ಪ್ರ-71ಬಸ್ಕಿ), ಚೈತನ್ಯ (ದ್ವಿ-67), ಧನುಷ್ (ತೃ-62), ಯುವಕರ ವಿಭಾಗದಲ್ಲಿ ವಿಕಾಸ್ (ಪ್ರ-74 ಬಸ್ಕಿ), ಸೈಯದ್ ಹುಸೇನ್ (ದ್ವಿ-73) ಮತ್ತು ಕಿರಣ್ (ತೃ-72), ಹೆಣ್ಣು ಮಕ್ಕಳ ವಿಭಾಗ ದಂಡ ಸರ್ಪೋಟ್ ಸ್ಪರ್ಧೆಯಲ್ಲಿ ಜಾನ್ಹವಿ (ಪ್ರ-32ದಂಡ), ರಕ್ಷ (ದ್ವಿ-28), ನಂದಿನಿ (ತೃ-26), ದಂಡ ಹೊಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಸಿದ 4 ಮಂದಿಯಲ್ಲಿ ನಂದಿನಿ ಎಂಬುವರು 48 ದಂಡ ಹೊಡೆದು ಪ್ರಥಮ ಸ್ಥಾನ ಗಳಿಸಿದರು.


Spread the love

Leave a Reply

Please enter your comment!
Please enter your name here