ದಸರಾ ಗೊಂಬೆ  ಕೂರಿಸುವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Spread the love

ದಸರಾ ಗೊಂಬೆ  ಕೂರಿಸುವ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಮೈಸೂರು: ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ದಸರಾ ಪ್ರಯುಕ್ತ  ಮನೆ ಮನೆಗಳಲ್ಲಿ ದಸರಾ ಗೊಂಬೆ  ಕೂರಿಸುವ ಸ್ಪರ್ಧೆಯ ವಿಜೇತರಿಗೆ  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನವನ್ನು ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆ  ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ವಿತರಿಸಲಾಯಿತು.

ಮೊದಲನೇ ಬಹುಮಾನ ಪಡೆದ ಬೋಗಾದಿ ನಿವಾಸಿ ರೇವತಿ ರಾಮಸ್ವಾಮಿ, ದ್ವಿತೀಯ ಬಹುಮಾನ ಪಡೆದ  ಅಲನಹಳಿ ಯ ಗಿರಿದರ್ಶಿನಿ ಬಡಾವಣೆಯ  ನಿವಾಸಿ ಗೀತಾ  ಶ್ರೀಹರಿ, ತೃತೀಯ ಬಹುಮಾನ ಕುವೆಂಪು ನಗರದ ನಿವಾಸಿ ಇಂದ್ರಾಣಿ ಶಂಕರ  ರವರಿಗೆ ಶ್ರೀ  ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ಮೊದಲನೇ ಬಹುಮಾನ ನಗದು 2000ರೂ ದ್ವಿತೀಯ 1000ರೂಹಾಗೂ ತೃತೀಯ 500ರೂ ನಗದು ಬಹುಮಾನ ನೀಡಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಿ ಅಭಿನಂದಿಸಲಾಯಿತು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಉತ್ತಮವಾಗಿ ಗೊಂಬೆಗಳನ್ನು  ಜೋಡಣೆ ಮಾಡಿದ 10ಸ್ಪರ್ಧಿಗಳಾದ,ದಟ್ಟಗಳ್ಳಿ ನಿವಾಸಿ ವರ್ಷ, ದಟ್ಟಗಳ್ಳಿ ರಾಣಿ ನಾಗಭೂಷಣ್, ವಿಜಯನಗರ ನಿವಾಸಿ ಜಯಶ್ರೀ  ಶಿವರಾಂ, ರಾಮಕೃಷ್ಣನಗರ ನಿವಾಸಿ ಜ್ಯೋತಿ ಕೆ ಆರ್ , ಶಿವರಾಂ ಪೇಟೆಯ ಪ್ರಭಾವತಿ, ಬೃಂದಾವನ ಬಡಾವಣೆ ತನುಜಾ ಅರವಿಂದ್, ಕುವೆಂಪು ನಗರ ನಿವಾಸಿ ರಾಜೇಶ್ವರಿ ಗಣೇಶನ್, ರಾಮಕೃಷ್ಣನಗರ ಜಯಲಕ್ಷ್ಮೀ ನರಸಿಂಹ. ಜೆಪಿ ನಗರ ಲೀಲಾವತಿ,ಸರಸ್ವತಿಪುರಂನ ಭಾನುಮತಿ, ವಿಶೇಷವಾಗಿ ಸಮಾಧಾನಕರ ಬಹುಮಾನ ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಮೇಯರ್ ಶಿವಕುಮಾರ, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ್ ಗೌಡ,  ಇಳೈ ಆಳ್ವಾರ್ ಸ್ವಾಮೀಜಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತೇಜಸ್ ಶಂಕರ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಸುಚೀಂದ್ರ, ಚಕ್ರಪಾಣಿ, ನಾಗಶ್ರೀ, ಸದಾಶಿವ್, ಮಾಧ್ವ ಹಾಗೂ ಇನ್ನಿತರರು ಹಾಜರಿದ್ದರು


Spread the love