ದಸರಾ ಚಲನಚಿತ್ರೋತ್ಸವದಲ್ಲಿ ದೇಶ ವಿದೇಶಗಳ ಸಿನಿಮಾ ಪ್ರದರ್ಶನ

Spread the love

ದಸರಾ ಚಲನಚಿತ್ರೋತ್ಸವದಲ್ಲಿ ದೇಶ ವಿದೇಶಗಳ ಸಿನಿಮಾ ಪ್ರದರ್ಶನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಚಲನಚಿತ್ರೋತ್ಸವ ಸೆ.26ರಿಂದ ಅ.3ರವರೆಗೆ 7 ದಿನಗಳ ಕಾಲ ನಡೆಯಲಿದ್ದು, ದೇಶ ವಿದೇಶದ 112 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಚಲನಚಿತ್ರೋತ್ಸವದ ಉಪ ವಿಶೇಷಾಧಿಕಾರಿ ಆರ್.ಶೇಷ ತಿಳಿಸಿದರು.

ವಾರ್ತಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಪ್ರಮುಖ ಆಕರ್ಷಣೆಗಳಲ್ಲಿ ಚಲನಚಿತ್ರೋತ್ಸವವೂ ಒಂದಾಗಿದ್ದು, ಸೆ.26 ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಡಾ.ಶಿವರಾಜ್ ಕುಮಾರ್ ಉದ್ಘಾಟಿಸುವರು. ಸೆ.27ರಿಂದ ಅ.3ರವರೆಗೆ 56 ಕನ್ನಡ, 28 ಪನೋರಮಾ, 28 ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಸೇರಿದಂತೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಐನಾಕ್ಸ್ ನಲ್ಲಿ 3 ಮತ್ತು ಡಿಆರ್‌ಸಿಯ 1 ಸ್ಕ್ರೀನ್ನಲ್ಲಿ ಪ್ರದರ್ಶನವಿರಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ-ನಟಿಯರಾದ ಅಮೃತ ಅಯ್ಯಂಗಾರ್, ಕಾವ್ಯಶೆಟ್ಟಿ, ಸುಧಾರಾಣಿ, ಅನುಪ್ರಭಾಕರ್ ಸೇರಿದಂತೆ ಅನೇಕ ತಾರೆಯರು  ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಚಲನಚಿತ್ರೋತ್ಸವದಲ್ಲಿ ಪುನೀತ್‌ರಾಜ್‌ಕುಮಾರ್ ಅವರ 6 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಪುನೀತ್‌ರಾಜ್‌ಕುಮಾರ್ ಬಾಲನಟರಾಗಿ ನಟಿಸಿರುವ ಬೆಟ್ಟದ ಹೂ, ಅಂಜನಿಪುತ್ರ, ರಾಜಕುಮಾರ, ಮೈತ್ರಿ, ಪೃಥ್ವಿ ಹಾಗೂ ಯುವರತ್ನ ಸಿನಿಮಾ ಪ್ರದರ್ಶನಗೊಳ್ಳಲಿದೆ. ಸಚಾರಿ ವಿಜಯ್ ಅವರು ನಟಿಸಿರುವ ತಲೆದಂಡ, ಪುಕ್ಸಟ್ಟೆ ಲೈಫು, ಆಕ್ಟ್ 1978 ಸಿನಿಮಾಗಳು ಪ್ರದರ್ಶನಗೊಳ್ಳುತ್ತವೆ. ಪುನೀತ್‌ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಶಕ್ತಿಧಾಮದ ಮಕ್ಕಳೊಂದಿಗೆ ಸೆ.27ರಂದು ಬೆಟ್ಟದ ಹೂ ಚಿತ್ರ ವೀಕ್ಷಿಸಲಿದ್ದಾರೆ. ಪ್ರತಿದಿನ ನಾಲ್ಕು ಚಿತ್ರಗಳನ್ನು ವೀಕ್ಷಿಸಬಹುದಾಗಿದ್ದು, ದಿನಕ್ಕೆ 100 ರೂ ಟಿಕೆಟ್ ದರನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ವಾರಕ್ಕೆ 300 ರೂ, ವಯಸ್ಕರಿಗೆ 500 ರೂ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಚಲನಚಿತ್ರೋತ್ಸವದೊಂದಿಗೆ ಸೆ.22, 23 ಮತ್ತು 24ರಂದು ಸಿನಿಮಾ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಚಲನಚಿತ್ರ ನಿರ್ಮಾಣದ ಪೂರ್ವ ತಯಾರಿ ಕುರಿತು ಮಾಹಿತಿ ನೀಡಲಾಗುತ್ತದೆ. ಕಾರ್ಯಾಗಾರವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಚಂಪಾಶೆಟ್ಟಿ, ಪ್ರಶಾಂತ್ ಪಂಡಿತ್, ಪ್ರವೀನ್ ಕೃಪಾಕರ್, ಪವನ್ ಕುಮಾರ್, ಶಂಕರ್ ಎನ್.ಸಂಡೂರು, ಪನ್ನಗಾಭರಣ, ಮಂಸೊರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರನ್ನು ಆಹ್ವಾನಿಸಲಾಗಿದ್ದು, ಪ್ರವೇಶಕ್ಕೆ 300 ರೂ ಶುಲ್ಕ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕನ್ನಡ ಚಿತ್ರಗಳು: 100, 777 ಚಾರ್ಲಿ, ಶ್ರೀ ಸುತ್ತೂರು ಮಠ-ರುಪರಂಪರೆ, ಆದ್ಯಾ, ಅವನೇ ಶ್ರೀಮನ್ನನಾರಾಯಣ, ಅವತಾರ ಪುರುಷ, ಬಡವರಾಸ್ಕಲ್, ಭಜರಂಗಿ-2, ಭರಾಟೆ, ದಿಯಾ, ದೃಶ್ಯ-2, ಗಾಳಿಪಟ, ಗರುಡಗಮನ ವೃಷಭ ವಾಹನ, ಜಂಟಲ್ ಮನ್, ಗಿಫ್ಟ್ ಬಾಕ್ಸ್, ಹರಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸ್ಪೆಕ್ಟರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್ 1, ಕೆಜಿಎಫ್ 2, ಲವ್ ಮಾಕ್ಟೇಲ್ 1, ಲವ್ ಮಾಕ್ಟೇಲ್-2, ಮದಗಜ, ಮುಗಿಲುಪೇಟೆ, ನಿನ್ನ ಸನಿಹಕೆ, ಒಂಭತ್ತನೇ ದಿಕ್ಕು, ಫೈಲ್ವಾನ್, ರೈಡರ್, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸುರತ್ಕಲ್, ವಿಕ್ರಾಂತ್ ರೋಣ, ವಿಂಡೋಸೀಟ್.

ಭಾರತೀಯ ಚಿತ್ರಗಳು: ಎ ಡಾಗ್ ಅಂಡ್ ಹಿಸ್ ಮ್ಯಾನ್, ಹರಿವ ನದಿಗೆ ಮೈಯೆಲ್ಲಾ ಕಾಲು, ಅಡಿಯುಗೊಡಾರ್ಡ್, ಅಗ್ನಿವರ್ಷ, ಐಸೇ ಹಿ, ಬಾಫ್, ಬೂಂಬಾ ರೈಡ್, ಈ ಮಣ್ಣು, ಘೋಡೇ ಕೋ ಜಲೇಬಿ ಖಿಲಾನೆ ಲೇಜಾರಿಯಾ ಹೂಂ, ಹಾರುವ ಹಂಸಗಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಇಂಟು ದಿ ಮಿಸ್ಟ್, ದಿ ಕ್ಲೌಡ್ ಅಂಡ್ ದಿ ಮ್ಯಾನ್, ಮನುಸಂಗಡ, ಮಿಂಚುಹುಳು, ಮೂಕಜ್ಜಿಯ ಕನಸುಗಳು, ನೀಲಿಹಕ್ಕಿ, ನೋಯ್, ಪದಕ, ಸಾರಾ ವಜ್ರ, ಉರಿಯಟ್ಟು, ವಿಡೋ ಆಫ್ ಸೈಲೆನ್ಸ್.

ವಿಶ್ವ ಚಿತ್ರಗಳು: ಜೆಂಟಲ್ ಕ್ರೀಚರ್, ಎ ಹೀರೋ, ಅಡಲ್ಟ್ ಇನ್ ದಿ ರೂಮ್, ಅನದರ್ ರೌಂಡ್, ಆಶ್ ಈಸ್ ದಿ ಪ್ಯೂರೆಸ್ಟ್ ವೈಟ್, ಕ್ಯಾಪರ್ನಾಮ್, ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್, ಎಕೈಲ್, ಐ ಡೇನಿಯಲ್ ಬ್ಲೇಕ್, ಲವ್‌ಲೆಸ್, ನಾರ್ಥ್ ಸೀ, ಪ್ಯಾರಲೆಲ್ ಮದರ್ಸ್, ಪ್ಯಾರಾಸೈಟ್, ಪೋಟ್ರೇಟ್ ಆಫ್ ಎ ಲೇಡಿ ಆನ್ ಫೈರ್, ಸಾರಿ ವಿ ಮಿಸ್ಡ್ ಯೂ, ಸ್ಪೆನ್ಸರ್, ಬೈಸಿಕಲ್ ಥೀವ್ಸ್, ದಿ ಲಾಸ್ಟ್ ಎಕ್ಸೆಕ್ಯೂಷನ್, ದಿ ಸೆವೆಂತ್ ಸೀಲ್, ದಿ ಟ್ಯೂರಿನ್ ಹಾರ್ಸ್, ಥ್ರೋನ್ ಆಫ್ ಬ್ಲಡ್, ಅನ್‌ಡೈನ್, ವ್ಯಾಗಾಬಾಂಡ್, ವಾಕಬೌಟ್, ವೆನ್ ಹಿಟ್ಲರ್ ಸ್ಟೋಲ್ ಪಿಂಕ್  ರಾಬಿಟ್,  ವಿಮೆನ್ ಇನ್ ದಿ ಡ್ಯೂನ್ಸ್ ಮೊದಲಾದ ಚಿತ್ರಗಳು ಪ್ರದರ್ಶನ ಕಾಣಲಿವೆ.

ಸುದ್ದಿಗೋಷ್ಠಿಯಲ್ಲಿ ಚಲನಚಿತ್ರೋತ್ಸವ ಕಾರ್ಯದರ್ಶಿ ಟಿ.ಕೆ.ಹರೀಶ್ ಇದ್ದರು.


Spread the love