ದಾಖಲೆ ಪ್ರಮಾಣದ ಅನುದಾನ, ಪ್ರವಾಸೋದ್ಯಮದಲ್ಲಿ ಕಾರ್ಕಳ ಮುಂಚೂಣಿ – ಸುನಿಲ್ ಕುಮಾರ್

Spread the love

ಕಾರ್ಕಳಕ್ಕೆ ದಾಖಲೆ ಪ್ರಮಾಣದ ಅನುದಾನ, ಪ್ರವಾಸೋದ್ಯಮದಲ್ಲಿ ಕಾರ್ಕಳ ಮುಂಚೂಣಿ – ಸುನಿಲ್ ಕುಮಾರ್

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 5 ವರ್ಷಗಳಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಕೋಟಿ ಅನುದಾನ ಬಳಕೆ ಮಾಡಲಾಗಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.

ಬಜಗೋಳಿ ಪರಿಸರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ  ಮಾತನಾಡಿದ ಅವರು ಕಾರ್ಕಳ ಕ್ಷೇತ್ರವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಕಳ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ 236ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟು ನಿರ್ಮಾಣದ ಮೂಲಕ ರೈತರಿಗೆ ಕೃಷಿ ಚಟುವಟಿಕೆಗೆ ಹಾಗೂ ಕುಡಿಯುವ ನೀರಿಗೆ ಪರಿಹಾರ ಒದಗಿಸಲಾಗಿದೆ. 108 ಕೋಟಿ ರೂ ವೆಚ್ಚದಲ್ಲಿ ಏತ ನೀರಾವರಿ ಯೋಜನೆ , ಕ್ಷೇತ್ರದಲ್ಲಿ ಗುಂಡಿ ಮುಕ್ತ ಮುಖ್ಯ ರಸ್ತೆಗಳ ಜೊತೆಗೆ ಗ್ರಾಮೀಣ ಭಾಗದಲ್ಲಿ ಸರ್ವಋತು ರಸ್ತೆಗಳೂ, ಹೆಬ್ರಿ ತಾಲೂಕಿಗೆ ನೂತನ ಆಡಳಿತ ಸೌಧ, ಪ್ರವಾಸಿ ಮಂದಿರ, ಪೊಲೀಸ್ ಠಾಣೆ, ಹೆಬ್ರಿ ತಾಲೂಕು ಪಂಚಾಯತ್ ಕಚೇಋಇ, ನೂತನ ಬಸ್ ನಿಲ್ದಾಣ, ಸುಸಜ್ಜಿತ ತಾಲೂಕು ಆಸ್ಪತ್ರೆ ನಿರ್ಮಾಣದ ಜೊತೆಗೆ ಡಯಾಲಿಸಿಸ್ ಕೇಂದ್ರ, ಆಮ್ಲಜನಕ ಉತ್ಪಾದನಾ ಘಟಕ, ಮಕ್ಕಳ ತೀವ್ರ ನಿಗಾಗಿ ಘಟಕ ಸ್ಥಾಪನೆ ಮಾಡಲಾಗಿದೆ ಎಂಧರು.

ಕ್ಷೇತ್ರದಲ್ಲಿ 25 ವರ್ಷಗಳಷ್ಟು ಹಳೆಯದಾದ ಒಳಚರಂಡಿ ವ್ಯವಸ್ಥೆ ಮರು ನಿರ್ಮಾಣ, ವ್ಯವಸ್ಥಿತ ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ನಿಟ್ಟೆ ಎಂ ಆರ್ ಎಫ್ ಘಟಕ ಸ್ಥಾಪನೆಯ ಮೂಲಕ ತ್ಯಾಜ್ಯಗಳಿಗೆ ಮುಕ್ತಿ ನೀಡುವುದರೊಂದಿಗೆ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜೋಡುರಸ್ತೆ, ಬಜಗೋಳಿ, ಮುನಿಯಾಲು, ಬೈಲೂರು ಚತುಷ್ಪಥ ರಸ್ತೆಗಳ ನಿರ್ಮಾಣ ಮಾಡಲಾಗಿದೆ ಎಂದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧೀಗಾಗಿ ಬಿ ಎಸ್ಸಿ ನರ್ಸಿಂಗ್ ಕಾಲೇಜು, ಜರ್ಮನ್ ತಂತ್ರಜ್ಞಾನದೊಂದಿಗೆ ಯುವಕರಿಗೆ ಉದ್ಯೋಗ ಭದ್ರತೆ ನೀಡುವ ಕೆಜಿಟಿಟಿಐ, ಟಾಟಾ ಟೆಕ್ನಾಲಜೀಸ್ ನೇತ್ರತ್ವದಲ್ಲಿ ಐಟಿಐ ಕಾಲೇಝು, ಕರ್ನಾಟಕ ಪಬ್ಲಿಕ್ ಸ್ಕೂಲ್, ಹಾಸ್ಟೇಲ್ ಹಾಗೂ ಶಾಲಾ ಕಾಲೇಜುಗಳ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ ಎಂದರು.

ಕಾರ್ಕಳವನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರವಾಸಿ ಆಕರ್ಷಣಾ ಕೇಂದ್ರವಾಗಿ ಹಂತ ಹಂತವಾಗಿ ನವರೂಪ ಪಡೆಯುತ್ತಿರುವ ಕೋಟಿ ಚೆನ್ನಯ್ಯ ಥೀಂ ಪಾರ್ಕ್, ಯಕ್ಷ ರಂಗಾಯಣ ಸ್ಥಾಪನೆ, ಕಾರ್ಕಳದ ಸಾಂಸ್ಕೃತಿಕ ಲೋಕ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಕಳ ಉತ್ಸವ, ಪರಶುರಾಮ ಥೀಂ ಪಾರ್ಕ್ ರಚನೆಯ ಮೂಲಕ ಕಾರ್ಕಳವನ್ನು ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿಸುವಲ್ಲಿ ಇನ್ನೂ ಹಲವಾರು ಯೋಜನೆಗಳಿವೆ ಎಂದರು.

ಜನರ ಸಮಸ್ಯೆಗಳಿಗೆ ಸದಾ ಸ್ಪಂದನೆ ನೀಡುವುದರ ಜೊತೆಗೆ ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸವಾಗಿದ್ದ ಬಡ ಕುಟುಂಬಗಳಿವೆ ಡೀಮ್ಡ್ ಫಾರೆಸ್ಟ್ ಕಾರಣದಿಂದ ನೆನಗುದಿಗೆ ಬಿದ್ದ 2600 ಕ್ಕೂ ಹೆಚ್ಚು ಹಕ್ಕು ಪತ್ರ ವಿತರಣೆ ಮಾಡಲಾಗಿದೆ. 6 ಕೋಟಿ ರೂ ವೆಚ್ಚದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಭವನ, ಮಾಳಗ್ರಾಮದಲ್ಲಿ ಮಲೆಕುಡಿಯ ಸಮುದಾಯ ಭವನ ನಿರ್ಮಾಣದ ಜೊತೆಗೆ ವಿವಿಧ ಸಮುದಾಯ ಭವನಗಳಿಗೆ ಅನುದಾನ ನೀಡಲಾಗಿದೆ ಎಂದರು.

ಮೆಸ್ಕಾಂ ವಿಭಾಗಿಯ ಕಚೇರಿ, ನಿಟ್ಟೆ ಉಪವಿಭಾಗ ಕಚೇರಿಗೆ ಹಾಗೂ ಶಾಖಾ ಕಚೇರಿಗಳ ಸ್ಥಾಪನೆಯೆ ಜೊತೆಗೆ ವಿವಿಧ ವಿದ್ಯುತ್ ಉಪಕೇಂದ್ರಗಳ ನಿರ್ಮಾಣ, ಬಡಜನರಿಗೆ ಬೆಳಕು ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ, ಕಾರ್ಕಳದಲ್ಲಿ ಕೋರ್ಟ್ ಕಟ್ಟಡ, ಪೊಲೀಸ್ ವಸತಿಗೃಹ ಇನ್ನೂ ಹತ್ತು ಹಲವು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.


Spread the love