ದಿಗ್ಗಜರ ಸಂಗಮಕ್ಕೆ ಸಾಕ್ಷಿಯಾದ ಕೆಂಪೇಗೌಡ ಜಯಂತಿ

Spread the love

ದಿಗ್ಗಜರ ಸಂಗಮಕ್ಕೆ ಸಾಕ್ಷಿಯಾದ ಕೆಂಪೇಗೌಡ ಜಯಂತಿ

ಹುಣಸೂರು: ಬೆಂಗಳೂರಿಗೆ ಸಿಮ್ಮಿತವಾಗಿದ್ದ ಕೆಂಪೇಗೌಡರ ಜಯಂತಿಯನ್ನು ಶಾಸಕ ಜಿ.ಟಿ.ದೇವೇಗೌಡ ಮೊದಲ ಬಾರಿಗೆ 2013ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಕೆಂಪೇಗೌಡ ಜಯಂತಿಯ ಜ್ಯೋತಿಯನ್ನು ತರುವುದರ ಮೂಲಕ ಕೆಂಪೇಗೌಡರ ಜಯಂತಿಗೆ ಕಾರಣರಾದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ನಗರಸಭೆ ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ 64 ವಿವಿಧ ಪೇಟೆಗಳನ್ನು ಹಾಗೂ ಕೆರೆಕಟ್ಟೆಗಳನ್ನು ಅಭಿವೃದ್ಧಿಪಡಿಸಿ ವಿಶ್ವದಲ್ಲೇ ಮಾದರಿ ನಗರವನ್ನಾಗಿ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೇವಲ ಒಕ್ಕಲಿಗ ಸಮಾಜದ ಜೊತೆಗೆ ಬೇರೆ ಸಣ್ಣ ಪುಟ್ಟ ಜಾತಿಗಳ ಸಹಾಯದಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ವಿಶ್ವವೇ ಕಾಣುವ ಹಾಗೆ ಬಡವರ ಕೆಲಸ ಮಾಡಿ ಜನಮೆಚ್ಚುಗೆ ಪಡೆದಿದ್ದಾರೆ ಎಂದರು.

ಕೆ.ಪಿ.ಸಿಸಿ ಅಧಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ಕೆಂಪೇಗೌಡರ 513ನೇ ಜಯಂತಿಯನ್ನು ಆಚರಿಸಿ ಅವರು ಮಾಡಿರುವ ಸಾಧನೆಯ ಬಗ್ಗೆ ಈಗಲೂ ಸ್ಮರಿಸುತ್ತೇವೆ. ಬೆಂಗಳೂರನ್ನು ವಿಶ್ವದಾಖಲೆ ಮಾಡಿದವರು ಕೆಂಪೇಗೌಡರು ಅದರಂತೆ ಮಾಜಿ ಮುಖ್ಯ ಮಂತ್ರಿಗಳಾದ ಎಸ್.ಎಂ.ಕೃಷ್ಣ, ಕೆಂಗಲ್ ಹನುಮಂತಯ್ಯ ಅವರದೇ ಆದ ಕೊಡುಗೆ ಬೆಂಗಳೂರಿಗೆ ನೀಡಿದ್ದಾರೆಂದರು. ಅದರೆ ದೇಶದಲ್ಲಿ ಸೈನಿಕ, ಕಾರ್ಮಿಕ, ಕೃಷಿಕ, ಶಿಕ್ಷಕ ಇಲ್ಲದಿದ್ದಲ್ಲಿ ಬದುಕಲು ಸಾಧ್ಯವಿಲ್ಲ ಎಂದರು. ಕೆಂಪೇಗೌಡರ ಕೇವಲ ಒಕ್ಕಲಿಗರಿಗೆ ಸೀಮಿತವಾಗದೇ ಎಲ್ಲಾ ವರ್ಗಗಳ ನಾಯಕರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಸಮಾಜದ ಆದಿಚುಂಚನಗಿರಿ ಶಾಖಾ ಮಠದ ಡಾ.ನಿರ್ಮಲಾನಂದನಾಥಸ್ವಾಮಿ ಹಾಗೂ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಹೆಚ್..ಪಿ.ಮಂಜುನಾಥ್, ಮಾಜಿ ಸಚಿವ ಹೆಚ. ವಿಶ್ವನಾಥ್, ಜಿ.ಡಿ.ಹರೀಶ್ ಗೌಡ, ಶಾಸಕ ಶರತ್ ಬಚ್ಚೇಗೌಡ ಮಾತನಾಡಿದರು.

ಇದೇ ಸಂದರ್ಭದಲ್ಲಿ ಪಿ.ಯು.ಸಿ ಹಾಗೂ ಎಸ್.ಎಲ್.ಸಿಯಲ್ಲಿ ಶೇ.90 ರಷ್ಟು ಅಂಕಪಡೆದ ವಿದ್ಯಾರ್ಥಿಗಳಿಗೆ ಸಂಘ ದಿಂದ ಸನ್ಮಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್, ಕೆ.ಮಹದೇವ್, ವೆಂಕಟರಮಣ್ಣಪ್ಪ, ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ರವೇಶ್‌ಗೌಡ, ಹೆಚ್.ವಿಶ್ವನಾಥ್, ದೇವರಹಳ್ಳಿ ಸೋಮಶೇಖರ್, ಸಿ.ಟಿ.ರಾಜಣ್ಣ, ಒಕ್ಕಲಿಗರ ಸಂಘದ ಅಧಕ್ಷ ಗಣೇಶ್, ನಿರ್ದೇಶಕರಾದ ಮಂಜುನಾಥ್, ಮರಿಗೌಡ, ಮುಖಂಡರು ಇದ್ದರು.


Spread the love