‘ದಿ ಎಂಪೋರಿ-ಯಂ 2022’’ ಫುಡ್ ಫೆಸ್ಟ್

Spread the love

‘ದಿ ಎಂಪೋರಿ-ಯಂ 2022’’ ಫುಡ್ ಫೆಸ್ಟ್

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗ ‘ದಿ ಎಂಪೋರಿ-ಯಂ 2022’’ ಫುಡ್ ಫೆಸ್ಟ್‍ನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಿತ್ತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಆಹಾರ ಉದ್ಯಮ ಎಂದೂ ತನ್ನ ಬೇಡಿಕೆಯನ್ನ ಕಳೆದುಕೊಳ್ಳಲಾರದು. ಕೋವಿಡ್‍ನಂತಹ ಸಂಕಷ್ಟಕರ ಸಂಧರ್ಭದಲ್ಲಿ ಅಲ್ಪ ಮಟ್ಟಿನ ಕುಸಿತ ಕಂಡರೂ, ಇದೀಗ ಮತ್ತೆ ಚೇತರಿಸಿಕೊಂಡು ವಿಫುಲ ಅವಕಾಶಗಳಿಗೆ ತರೆದುಕೊಂಡಿದೆ. ಈ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು, ಉತ್ತಮ ರೀತಿಯ ಸೇವೆಯನ್ನು ನೀಡಿದರೆ ಅತ್ಯಂತ ಲಾಭಾದಾಯಕ ವ್ಯಾವಹಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಕಿದಿಯೂರು ಹೋಟೇಲ್ ಪ್ರೈ. ಲಿ. ನ ಕಾರ್ಯನಿರ್ವಾಹಕ ಬಾಣಸಿಗ ಗಣೇಶ ಮೂಲ್ಯ ಹಾಗೂ ಮಂಗಳೂರಿನ ಅವತಾರ್ ಗ್ರೂಪ್ ಆಫ್ ಹೋಟೇಲಿನ ಮಾಲಕ ಜೂಲಿಯನ್ ವಿನೋಥ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

ವಿದ್ಯಾರ್ಥಿಗಳಾದ ಶಾಶ್ವತ ಹಾಗೂ ಡೈಸೀ ಡಿಸೋಜಾ ಕಾರ್ಯಕ್ರಮದ ಮುಖ್ಯ ಪ್ರಾಯೋಜಕತ್ವ ವಹಿಸಿದ್ದರು. ಭೂಮಿಕ ಹಾಗೂ ಸುಶಾನ್ ಕಾರ್ಯಕ್ರಮ ನಿರ್ವಹಿಸಿ, ಮಾಲಾಶ್ರೀ ಜಿ ಸ್ವಾಗತಿಸಿ, ಡಾನ್ ಡಿಮೆಲ್ಲೋ ವಂದಿಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗದ ಮುಖ್ಯಸ್ಥ ಟೆರೆನ್ಸ್ ರೊಡ್ರೀಗಸ್, ಉಪನ್ಯಾಸಕರಾದ ರೋಶನ್, ರತ್ನಾಕರ ಉಪಸ್ಥಿತರಿದ್ದರು.

ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ವಿವಿಧ ಕೌಂಟರ್‍ಗಳಲ್ಲಿ ವೈವಿಧ್ಯಮಯ ಅಂತರಾಷ್ಟ್ರೀಯ ಖಾದ್ಯಗಳನ್ನು ತಯಾರಿಸಿ ಆಹಾರ ಪ್ರಿಯರ ರುಚಿ ತಣಿಸಿದರು. ಲೈವ್ ಮೊಕ್‍ಟೈಲ್ ಕೌಂಟರ್, ಲೈವ್ ಫುಡ್ ಕೌಂಟರ್, ಲೈವ್ ಫ್ಲೇಮ್ ಕೌಂಟರ್, ಲೈವ್ ಗೇಮ್ಸ್, ಲೈವ್ ಕರ್ವಿಂಗ್ ಡಿಸ್‍ಪ್ಲೇ ಕೌಂಟರ್ ಮೂಲಕ ಆಗಮಿಸಿದ ವಿದ್ಯಾರ್ಥಿಗಳಿಗೆ ಬಗೆಬಗೆಯ ಚಾಟ್ಸ್, ಪಾಸ್ತಾ, ಬರ್ಗರ್, ಇಟೇಲಿಯನ್, ಅಮೇರಿಕನ್, ಚೈನೀಸ್ ತಿಂಡಿ ತಿನಿಸುಗಳನ್ನು ಕಡಿಮೆ ದರದಲ್ಲಿ ನೀಡಲಾಗಿತ್ತು. ಕಾಲೇಜಿನ ಬಿವಿಯ ವಿದ್ಯಾರ್ಥಿಗಳಿಂದ ಸ್ಥಳದಲ್ಲೆ ಭಾವಚಿತ್ರ ಬಿಡಿಸುವ ವ್ಯವಸ್ಥೆ ಹಾಗೂ ಕೆಲ್ವಿನ್ ಮೋರಸ್‍ನ ಫೈರ್ ಪ್ಲೇರಿಂಗ್ ಎಲ್ಲರ ಗಮನ ಸೆಳೆಯಿತು.


Spread the love