
ದುಬಾಯಿಯಲ್ಲಿ ವಿಜೃಂಬಣೆಯಿಂದ ನಡೆದ ಶ್ರೀ ಸತ್ಯನಾರಾಯಣ ಪೂಜೆ
ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ 2023 ಫೆಬ್ರವರಿ 19ನೇ ತಾರೀಕಿನಂದು ದುಬಾಯಿ ಅಲ್ ಗಿಸೇಸ್ನಲ್ಲಿರುವ ಇಂಡಿಯನ್ ಅಕಾಡೆಮಿ ಸ್ಕೂಲ್ ಸಭಾಂಗಣದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಆಯೋಜಿಸಲಾಗಿತ್ತು
ಅಪಾರ ಸಂಖೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದು ಅತ್ಯಂತ ವಿಜೃಂಬಣೆಯಿಂದ ಆಚರಿಸಲ್ಪಟ್ಟಿತ್ತು. ರಘುರಾಜ್ ಭಟ್ ರವರ ಪೌರೋಹಿತ್ಯದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ ಪ್ರಾರ್ಥನೆ, ಸಂಕಲ್ಪ, ಗುರು ಗಣಪತಿ ಪೂಜೆ, ಕಳಸ ಪ್ರತಿಷ್ಠಾಪನೆ, ನವಗ್ರಹ ಪೂಜೆ, ಸತ್ಯನಾರಾಯಣ ವೃತ ಕಲ್ಪೊತ ಪೂಜೆ, ಶ್ರೀ ಸತ್ಯನಾರಾಯಣ ವೃತ ಕಥೆ, ನೈವೆಧ್ಯ, ಮಹಾ ಮಂಗಳಾರತಿ, ಬ್ರಾಹ್ಮಣ ಅರಾಧನೆ, ಸುಮಂಗಲಿ ಪೂಜೆ, ಕನ್ನಿಕಾ ಪೂಜೆ, ಪ್ರಸಾದ ವಿತರಣೆ, ಮಹಪ್ರಸಾದ ಅನ್ನ ಸಂತರ್ಪಣೆ ನಡೆಯಿತು.
ಪಾರಿಜಾ ಆನಂದ್ ಬೈಲೂರ್, ಮತ್ತು ಶಾಲಿನಿ ಸಂದೇಶ್ ಜೈನ್ ಅಂಗಾಡಿಬೆಟ್ಟು ಪೂಜೆಗೆಯಲ್ಲಿ ಪಾಲ್ಗೊಂಡು ಪೂಜಾ ಕೈಂಕರ್ಯದಲ್ಲಿ ಭಾಗಿಗಳಾದರು. ಸುಮಂಗಲಿ ಪೂಜೆಯಲ್ಲಿ ಅಮೃತಾ ಕೆಂಜೂರ್, ವಿಜಯಲಕ್ಷ್ಮೀ, ರಮಾದೇವಿ ನಾಯಕ್, ವತ್ಸಲಾ ಶೆಟ್ಟಿ, ಗೀತಾ ಮೋಹನ್ ಪಾಲ್ಗೊಂಡಿದ್ದರು. ಕನ್ನಿಕಾರಾಧನೆಯಲ್ಲಿ ತೇಜಶ್ರೀ, ಶ್ರೇಯಾ, ನಕ್ಷತ್ರ, ನಿಶಿಕಾ ಪುನೀತ್, ಐಶನಿ ಶೆಟ್ಟಿ ಭಾಗವಹಿಸಿದ್ದರು.
ಮೊಗವೀರ್ಸ್ ಭಜನಾ ಮಂಡಳಿ ದುಬಾಯಿ ಮತ್ತು ಶ್ರೀ ರಾಜರಾಜೇಶ್ವರಿ ಭಜನಾ ತಂಡಾ ದುಬಾಯಿ ಇವರ ವತಿಯಿಂದ ಭಕ್ತಿ ಸಂಗೀತ ದೀಪ ನೃತ್ಯ ಸೇವೆ ಕಾರ್ಯಕ್ರಮ ಜನಮನ ಸೆಳೆಯಿತು. ಶ್ರೀ ವರಮಾಹಲಕ್ಷ್ಮೀ ಪೂಜಾ ಸೇವಾ ಸಮಿತಿ, ಬಿರುವೆರ್ ಕುಡ್ಲ ದುಬಾಯಿ, ಗಾಣಿಗ ಸಮಾಜ ದುಬಾಯಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದ್ದರು. ಅಕರ್ಷಕ ಪೂಜಾ ಮಂಟಪ ರಾಜೇಶ್ ಕುತ್ತಾರ್, ದೀಪಕ್ ಕೊಟ್ಯಾನ್, ಪುರಂದರ ಇವರ ಹಸ್ತ ಕೌಶಲ್ಯದಿಂದ ನಿರ್ಮಾಣವಾಗಿತ್ತು.
ಸಾಮೂಹಿಕ ಶ್ರೀ ಸತ್ಯನಾರಾಯಣ ಸಮಿತಿಯಯ ಸತೀಶ್ ಪೂಜಾರಿ – ಬಿಲ್ಲವ ಸಮಾಜ, ವಿಶ್ವನಾಥ್ ಶೆಟ್ಟಿ ಬಂಟ ಸಮುದಾಯ, ಶಾಂತಾರಾಂ ಆಚಾರ್ – ವಿಶ್ವಕರ್ಮ ಸಮಾಜ, ಬಾಲಕೃಷ್ಣ ಸಾಲಿಯಾನ್ – ಮೊಗವೀರ್ಸ್ ಸಮುದಾಯ, ಧನಂಜಯ ಶೆಟ್ಟಿಗಾರ್ – ಪದ್ಮಶಾಲಿ ಸಮುದಾಯ, ಸಂದೇಶ್ ಜೈನ್ – ಜೈನ್ ಸಮಾಜ, ವಿವೇಕ್ – ತೀಯಾ ಸಮಾಜ, ಪದ್ಮರಾಜ್ ಎಕ್ಕಾರ್ – ಕುಲಾಲ್ ಸಮಾಜ, ಸುಗಂಧರಾಜ್ ಬೇಕಲ್ – ರಾಮಕ್ಷತ್ರೀಯ ಸಮಾಜ, ದಿನೇಶ್ ರಜಕ ಸಮಾಜ, ರಮೇಶ್ –ಗಾಣಿಗ ಸಮಾಜ ಜೀವನ ಕುಕ್ಯಾನ್ ಮತ್ತು ಜಗನ್ನಾಥ್ – ಬಿಲ್ಲವ ಸಮಾಜ, ವಾಸು ಶೆಟ್ಟಿ ಮತ್ತು ಗಣೇಶ್ ರೈ ಬಂಟ ಸಮುದಾಯ ದಿಂದ ಪ್ರತಿನಿಧಿಸಿ ಪೂಜಾ ಕಾರ್ಯವನ್ನು ಆಯೋಜಿಸಿದ್ದರು. ಮಹಾಪ್ರಸಾದ ಸಾಹಿಬಾ ಕ್ಯಾಟರಿಂಗ್ ನ ಶೇಖರ ಶೆಟ್ಟಿಯವರದಾಗಿತ್ತು. ಯು.ಎ.ಇಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾಧಿಗಳು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ಪುನೀತರಾದರು