ದುಬಾರಿ ದುನಿಯಾಕ್ಕೆ ಪೂರಕ ಬಜೆಟ್ – ಭಾಸ್ಕರ್ ರಾವ್ ಕಿದಿಯೂರು

Spread the love

ದುಬಾರಿ ದುನಿಯಾಕ್ಕೆ ಪೂರಕ ಬಜೆಟ್ – ಭಾಸ್ಕರ್ ರಾವ್ ಕಿದಿಯೂರು

ಉಡುಪಿ: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತರಾಮನ್ ಅವರು ಸೋಮವಾರ ಮಂಡಿಸಿರುವ ಬಜೆಟ್ ದುಬಾರಿ ದುನಿಯಾಕ್ಕೆ ಪೂರಕವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಹೇಳಿದ್ದಾರೆ.

ಬಜೆಟ್ನಲ್ಲಿ ಪೆಟ್ರೊಲ್ ಡೀಸೆಲ್ ಮೇಲೆ ಕೃಷಿ ಸೆಸ್ ಹೇರಿ ಗ್ರಾಹಕರಿಗೆ ಇನ್ನಷ್ಟು ಹೊರೆಯಾಗಲಿದೆ. ದೇಶೀಯ ಉತ್ಪಾದನೆಗೆ ಒತ್ತು ನೀಡದೆ ಆಮದು ವಸ್ತುಗಳಿಗೆ ತೆರಿಗೆ ಏರಿಕೆ ಮಾಡಿ ಜನರಿಗೆ ಹೆಚ್ಚಿನ ಹೊರೆಯನ್ನು ನೀಡಲಾಗಿದೆ. ಆದಾಯ ತೆರಿಗೆ ವಿನಾಯಿತಿಯಲ್ಲಿ ಬದಲಾವಣೆಯಿಲ್ಲದೆ 75 ವರ್ಷದ ಹಿರಿಯ ನಾಗರೀಕರಿಗೆ ಕೊಡಮಾಡಿದ ತೆರಿಗೆ ವಿನಾಯಿತಿಯನ್ನು 65 ವರ್ಷಕ್ಕೆ ಇಳಿಸಬೇಕಾಗಿತ್ತು. ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರ ಮೇಲೆಯೇ ಕೇಂದ್ರ ಸರಕಾರ ಮತ್ತಷ್ಟು ಹೊರೆಯನ್ನು ಹೊರೆಸುತ್ತಿದೆ. ಅಚ್ಚೇ ದಿನಗಳು ಗಗನ ಕುಸುಮವಾಗಿಯೇ ಉಳಿದವು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love