
ದುಬೈ ಮಾರ್ಕೆಟ್ ನಲ್ಲಿ ಗುಂಪಿನಿಂದ ನೈತಿಕ ಪೊಲೀಸ್ ಗಿರಿ – ಮ್ಹಾಲಕನಿಗೆ ಥಳಿಸಿ ಯುವಕರು ಪರಾರಿ
ಮಂಗಳೂರು: ದುಬೈ ಮಾರ್ಕೆಟ್ ನಲ್ಲಿ ಗುಂಪಿನಿಂದ ನೈತಿಕ ಪೊಲೀಸ್ ಗಿರಿ , ಮೊಬೈಲ್ ಮಾಲಕನಿಗೆ ಥಳಿಸಿ ಯುವಕರು ಪರಾರಿಯಾದ ಘಟನೆ ನಡೆದಿದೆ.
ಸ್ವಲ್ಪ ದಿನ ತಣ್ಣಗಾಗಿದ್ದ ನೈತಿಕ ಪೊಲೀಸ್ ಗಿರಿ ಮತ್ತೆ ಬಾಲ ಬಿಚ್ಚಿದೆ ಮಂಗಳೂರು ನಗರದ ಹೃದಯ ಭಾಗದ ಸೆಂಟ್ರಲ್ ಮಾರ್ಕೆಟ್ ಬಳಿ ದುಬೈ ಮಾರ್ಕೆಟ್ ಮಳಿಗೆ ಕಾರ್ಯಾಚರಿಸುತ್ತಿದ್ದು, ಮಂಗಳವಾರ ಗ್ರಾಹಕ ಓರ್ವ ಪವರ್ ಪ್ಯಾಕ್ ರಿಪೇರಿಗೆಂದು ಬಂದಿದ್ದು ರಿಪೇರಿ ಮಾಡಲು ಸೂಚಿಸಿದರು. ಅಂಗಡಿ ಮಾಲಕ ನಾವು ಮೊಬೈಲ್ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡುದಿಲ್ಲ ಎಂದಕ್ಕೆ ,ಸ್ಕ್ರೂ ಡ್ರೈವರ್ ಕೊಡು ನಾನೆ ಸರಿಮಾಡುತೇನೆ ಎಂದನು ಅದಕ್ಕೆ ಆಗಲ್ಲ ನಾವು ಬ್ಯುಸಿ ಇದ್ದೇವೆ ಎಂದಕ್ಕೆ ಮಾತಿಗೆ ಮಾತು ಬೆಳೆದು ಬಂದ ಗ್ರಾಹಕ ಅಂಗಡಿ ಮಾಲಕನಿಗೆ ಹಲ್ಲೆ ಮಾಡುತ್ತಾನೆ . ಇದಕ್ಕೆ ಪ್ರತಿರೋಧ ವ್ಯಕ್ತ ಪಡಿಸಿದಕ್ಕೆ ಕೋಪಿತ ಗೊಂಡ ಗ್ರಾಹಕ ತನ್ನ ಗೆಳೆಯರ ಗುಂಪನ್ನ ಕರೆದು ಹಿಗ್ಗಾ ಮುಕ್ಕ ಥಳಿಸಿದ ಘಟನೆ ನಡೆಯಿತು.
ಹಲ್ಲೆ ಮಾಡಿದ ವಿಡಿಯೋ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದ್ದು . ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಸಂಬಂಧಪಟ್ಟ ಇಬ್ಬರನ್ನ ಬಂಧಿಸಲಾಗಿದೆ . ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ