ದೂರದೃಷ್ಟಿಯ ಯೋಜನೆಗಳಿಂದ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯಲು ಸಾಧ್ಯ – ಕೆ.ಜಯಪ್ರಕಾಶ್ ಹೆಗ್ಡೆ

Spread the love

ದೂರದೃಷ್ಟಿಯ ಯೋಜನೆಗಳಿಂದ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯಲು ಸಾಧ್ಯ – ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ: ಮುಂದಿನ ಪೀಳಿಗೆಗೆ ಅಭಿವೃದ್ಧಿ ಹೊಂದಿದ ಉಡುಪಿ ಜಿಲ್ಲೆಯನ್ನು ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ. ದೂರದೃಷ್ಟಿಯ ಯೋಜನೆಗಳಿಂದ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯಲು ಸಾಧ್ಯ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಶುಕ್ರವಾರ ಸಂಜೆ ಮಲ್ಪೆ ಬೀಚ್ ನಲ್ಲಿ , ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಜತ ಉಡುಪಿ- ಬೀಚ್ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 25 ವರ್ಷದ ಹಿಂದಿನಿಂದ ಇಂದಿನವರೆಗೆ ಆದ ಅಭಿವೃದ್ಧಿ ಹಾಗೂ ಮುಂದಿನ ಅಭಿವೃದ್ದಿ ಬಗ್ಗೆ ನಡೆದ ದೂರದೃಷ್ಟಿ ಕಾರ್ಯಕ್ರಮ ದ ಉದ್ದೇಶದಂತೆ , ಮುಂದಿನ ಪೀಳಿಗೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮತ್ತು
ಮೂಲಭೂತ ಸೌಕರ್ಯ ಅಗಬೇಕು. ಪ್ರವಾಸ ಉದ್ಯಮ ಇನ್ನಷ್ಟು ಅಭಿವೃದ್ದಿಗೊಳ್ಳಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ರಜತ ಉತ್ಸವ ದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಜಿಲ್ಲೆಯು ಮುಂದಿನ 25 ವರ್ಷಗಳ ಅಭಿವೃದ್ಧಿ ಕುರಿತು ಯೋಜನೆ ತಯಾರಿಸಿದೆ. ಪ್ರವಾಸೋದ್ಯಮ ವನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಲಾಗುತ್ತಿದೆ.

ಬೀಚ್ ಉತ್ಸವ ದ ಪ್ರಯುಕ್ತ ನಿಯೋನ್ ಲೈಟಿಂಗ್, ಫ್ಲೈ ಬೋರ್ಡ್, , ಐಲ್ಯಾಂಡ್ ನಲ್ಲಿ ಕ್ಲಿಪ್ ಡ್ರೈವ್ , ಯಾಟ್ ಸೇವೆ,ಸ್ಕ್ಯೂಬಾ ಡ್ರೈವ್ ಆರಂಭಗೊಳ್ಳಲಿದೆ. ಒಪೆನ್ ಸೀ ವಾಟರ್ ಈಜು ಸ್ಪರ್ಧೆ, ಜನರಲ್ ತಿಮ್ಮಯ್ಯ ಅಕಾಡೆಮಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕಯಾಕಿಂಗ್ , ಮಹಿಳೆಯರ ತ್ರೌಬಾಲ್, ಚಿತ್ರಕಲಾ ಶಿಬಿರ, ಪ್ರೇಕ್ಷನಿಯ ಸ್ಥಳಗಳ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀಶ ಕೊಡವೂರು, ಜಿ. ಪಂ. ಸಿಇಒ ಪ್ರಸನ್ನ ಹೆಚ್, ಎಸ್ಪಿ ಹಾಕ್ ಅಕ್ಷಯ್ ಮಚ್ಚಿಇಂದ್ರ, ತರಬೇತಿ ನಿರತ ಜಿಲ್ಲಾಧಿಕಾರಿ ಯತೀಶ್ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ವೀಣಾ ವಂದಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ನಿರೂಪಿಸಿದರು.

ಬೀಚ್ ನಲ್ಲಿ ಫ್ಲೈ ಬೋರ್ಡ್, ಚಿತ್ರಕಲಾ ಸ್ಪರ್ಧೆ, ಆಹಾರ ಮೇಳ, ಸಮುದ್ರ ಮಧ್ಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೋಟ್ ಆಕರ್ಷಕ ವಾಗಿತ್ತು.

ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.


Spread the love

Leave a Reply

Please enter your comment!
Please enter your name here