ದೂರದೃಷ್ಟಿಯ, ಸಂತುಲಿತ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಬಜೆಟ್ – ಕ್ಯಾ ಗಣೇಶ್ ಕಾರ್ಣಿಕ್

Spread the love

ದೂರದೃಷ್ಟಿಯ, ಸಂತುಲಿತ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಬಜೆಟ್ – ಕ್ಯಾ ಗಣೇಶ್ ಕಾರ್ಣಿಕ್

ಮಂಗಳೂರು: ನಮ್ಮ ದೇಶದ ವಿತ್ತ ಮಂತ್ರಿಗಳಾದ ನಿರ್ಮಾಲ ಸೀತಾರಮನ್‌ರವರು ಪ್ರಸ್ತುತ ಪಡಿಸಿದ, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಕಲ್ಪನೆಯ ಈ ಅಮೃತ ಕಾಲದಲ್ಲಿ ದೇಶವನ್ನು ಇಂಡಿಯಾ @ 100 ಹೇಗಿರಬೇಕೆಂಬ ಪರಿಕಲ್ಪನೆಯನ್ನು ಮುಂದಿಟ್ಟುಕೊAಡು ಅಮೃತಕಾಲದಲ್ಲಿ ದೇಶವನ್ನು ಪ್ರಪಂಚದ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಗೆ ಕೊಂಡೊಯ್ಯುವ ದೂರದೃಷ್ಟಿಯ, ಸಂತುಲಿತ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಬಜೆಟ್ 2023-24ನ್ನು ಅತ್ಯಂತ ಸಂತೋಷದಿAದ ಸ್ವಾಗತಿಸುತ್ತೇನೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ

ರೂ. 10 ಲಕ್ಷ ಕೋಟಿಗೂ ಮಿಕ್ಕಿದ ಮೂಲಭೂತ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆ ದೇಶದ ಆರ್ಥಿಕತೆಗೆ ಮತ್ತು ಉದ್ಯೋಗ ಸೃಷ್ಟಿಗೆ ಒಂದು ಹೊಸ ವೇಗವನ್ನು ನೀಡಲಿದ್ದು ಅತ್ಯಂತ ಸ್ವಾಗತರ್ಹ ಬೆಳವಣಿಗೆ. ಈ ಹಿಂದೆ ಘೋಷಣೆ ಮಾಡಿದ ಗತಿ ಶಕ್ತಿ ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಇದು ಪೂರಕವಾಗಿದ್ದು ಇದನ್ನು ಸ್ವಾಗತಿಸುತ್ತೇನೆ.

ರೂ. 5.94 ಲಕ್ಷ ಕೋಟಿಯ ರಕ್ಷಣಾ ಕ್ಷೇತ್ರದ ಅನುದಾನ ನಮ್ಮ ಸೇನೆಗೆ ಇನ್ನಷ್ಟು ಬಲ ನೀಡಲಿದ್ದು, ಇದು ದೇಶದಲ್ಲಿನ ರಾಜಕೀಯ ಸ್ಥಿರತೆ ಮತ್ತು ಹೆಚ್ಚಿನ ಭದ್ರತೆಗೆ ಇನ್ನಷ್ಟು ಹೆಚ್ಚು ಪ್ರೋತ್ಸಾಹ ನೀಡಲಿದ್ದು ಹೂಡಿಕೆದಾರರಿಗೆ ನಮ್ಮ ದೇಶದಲ್ಲಿ ಹೂಡಿಕೆ ಮಾಡಲು ಹೆಚ್ಚು ವಿಶ್ವಾಸ ನೀಡಲಿದ್ದು ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ವಿಶ್ವಕರ್ಮ ಕೌಶಲ್ಯ ಯೋಜನೆ (ಪಿ.ಎಮ್ ವಿಕಾಸ್) ನ ಮೂಲಕ ಸ್ಥಳೀಯರಲ್ಲಿ ಲಭ್ಯವಿರುವ ಅದ್ಭುತವಾದ ಕೌಶಲ್ಯವನ್ನು ವೃತ್ತಿಪರ ತರಭೇತಿಯ ಮೂಲಕ ಜಗತ್ತಿಗೆ ಪರಿಚಯಿಸುವುದರ ಮೂಲಕ ಅರ್ಥಿಕ ಸ್ವಾವಲಂಬನೆಯ ಪರಿಕಲ್ಪನೆ ಶ್ಲಾಘನೀಯ.

ಮಧ್ಯಮ ವರ್ಗದವರಿಗೆ ಇನ್ಕಮ್ ಟ್ಯಾಕ್ಸ್ ನಲ್ಲಿ ನೀಡಿರುವ ರಿಯಾಯಿತಿ ಇನ್ಕಮ್ ಟ್ಯಾಕ್ಸ್ ರಿಟರ್ನ್ನಲ್ಲಿ ತಂದಿರುವ ಸರಳತೆ ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಹೊಸ ಸ್ಲಾಬ್‌ಗಳಲ್ಲಿ ಇನ್ನಷ್ಟು ಜನರನ್ನು ತೆರಿಗೆ ವ್ಯಾಪ್ತಿಗೆ ತರುವುದರಲ್ಲಿ ಸಂದೇಹವೇ ಇಲ್ಲ.

ಎಂ.ಎಸ್.ಎಮ್.ಇ ಗಳಿಗೆ, ಸ್ಟಾರ್ಟ್ಅಪ್ ಕಂಪನಿಗಳಿಗೆ, ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ನಲ್ಲಿ ಇರುವಂತಹ ಯುವಕರಿಗೆ ಪ್ರೋತ್ಸಾಹ ನೀಡಲಿರುವ ನಿರ್ಣಯ ಒಂದು ಗಮನಾರ್ಹ ಬೆಳವಣಿಗೆ. ಜೊತೆಗೆ ಮೊಬೈಲ್ ಕ್ಷೇತ್ರ ಸೇರಿದಂತೆ ವಿಧ್ಯುನ್ಮಾನ ಉದ್ಯಮಗಳಿಗೆ ನೀಡಿದ ಪಿ.ಎಲ್.ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್)ಅನ್ನು ಮುಂದುವರಿಸಿರುವುದು ಆರ್ಥಿಕತೆಯ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿ ಮಾಡಲು ಪ್ರೋತ್ಸಾಹ ನೀಡಿವಂತಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿಯ ಹೂಡಿಕೆ ಮತ್ತು ಅದನ್ನು ಕೇಂದ್ರ ಯೋಜನೆಯಾಗಿ ಪರಿವರ್ತಿಸಿರುವುದು ಕರ್ನಾಟಕದ ಜನತೆಗೆ ಖಂಡಿತ ಸಂತಸ ನೀಡಿದೆ. ಅದಲ್ಲದೆ ಪಶು ಸಂಗೋಪನೆ ಮತ್ತು ಮೀನುಗಾರಿಕೆಗೆ ವಿಶೇಷ ಪ್ರೋತ್ಸಾಹ ನೀಡಿರುವುದು ಕರಾವಳಿ ಕರ್ನಾಟಕಕ್ಕೆ ವಿಶೇಷ ಕೊಡುಗೆಯಾಗಲಿದೆ. ಜಲಮಾರ್ಗದ ಮೂಲಕ ಸರಕು ಸಾಗಾಣಿಕೆಗೆ ಆದ್ಯತಪೂರ್ವಕವಾಗಿ ಅವಕಾಶ ನೀಡಿರುವುದು ಕರಾವಳಿ ರಾಜ್ಯಗಳಿಗೆ ವಿಶೇಷ ಒತ್ತನ್ನು ನೀಡಿದಂತಾಗಿದ್ದು ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಿದೆ.

50 ಹೊಸ ವಿಮಾನ ನಿಲ್ದಾಣಗಳ ಮತ್ತು ಹೆಲಿಪ್ಯಾಡ್‌ಗಳ ನಿರ್ಮಾಣ ಯೋಜನೆ ಹಾಗೂ ಹೊಸ 3 ಇಂಟರ್ನ್ಯಾಷನಲ್ ಸ್ಕಿಲ್ ಸೆಂಟರ್‌ಗಳ ನಿರ್ಮಾಣ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ನಮ್ಮ ದೇಶವು ಒಂದು ಜಾಗತಿಕ ಕೌಶಲ್ಯ ತಾಣವಾಗಿ ಪರಿವರ್ತನೆಯಾಗುವುದರಲ್ಲಿ ಸಂದೇಹವಿಲ.್ಲ

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮತ್ತು ದೇಶಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವುದು, ಯುನಿಟಿ ಮಾಲ್‌ಗಳ ಸ್ಥಾಪನೆ ಮೂಲಕ ದೇಶೀಯ ಉತ್ಪನ್ನಗಳಿಗೆ, ಗುಡಿಕೈಗಾರಿಕೆಗಳ ಉತ್ಪನ್ನಗಳಿಗೆ, ಸ್ಥಳೀಯ ಆಟಿಕೆಗಳಿಗೆ ಪ್ರೋತ್ಸಾಹ ನೀಡಲಿದೆ.

ಸುಮಾರು ರೂ. 20 ಲಕ್ಷ ಕೋಟಿಗಳಷ್ಟು ಸಾಲವನ್ನು ಗ್ರಾಮೀಣ ಪ್ರದೇಶದಲ್ಲಿ ಕೃಷಿಗಾಗಿ ನೀಡಲಿರುವುದು, ಸಾವಯವ ಕೃಷಿ ಮತ್ತು ಮಿಲೆಟ್ ಉತ್ಪಾದನೆಗೆ ನೀಡಿರುವ ಪ್ರೋತ್ಸಾಹ, ಪಶು ಸಂಗೋಪನೆ ಹಾಗೂ ಮೀನುಗಾರಿಕೆಗೆ ನೀಡಿರುವ ಪ್ರಾಮುಖ್ಯತೆ ಗ್ರಾಮೀಣ ಪ್ರದೇಶದಲ್ಲಿ ಒಂದು ದೊಡ್ಡ ಆರ್ಥಿಕ ಕ್ರಾಂತಿಯನ್ನು ಮಾಡುವುದರಲ್ಲಿ ಸಂದೇಹವಿಲ್ಲ.

ಒಟ್ಟಿನಲ್ಲಿ ದೇಶದ ವಿತ್ತ ಮಂತ್ರಿಗಳಾದ ಶ್ರೀಮತಿ ನಿರ್ಮಲ ಸೀತಾರಾಮನ್‌ರವರು ಪ್ರಪಂಚವೇ ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವ ಮತ್ತು ಅನೇಕ ಸಂಕಷ್ಟಗಳನ್ನು ಮತ್ತು ಆರ್ಥಿಕ ಹಿನ್ನಡೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಆರ್ಥಿಕ ಶಿಸ್ತಿನ, ಹೂಡಿಕೆಯನ್ನು ಪ್ರೋತ್ಸಾಹಿಸುವ, ದೇಶದಾದ್ಯಂತ ಉತ್ಪಾದನೆ ಮತ್ತು ಬಳಕೆಯನ್ನು ಪ್ರೋತ್ಸಾಹಿಸುವ, ಶೇ.7 ರ ಆರ್ಥಿಕ ಪ್ರಗತಿಯನ್ನು ಸಾಧಿಸುವ ಗುರಿಯೊಂದಿಗೆ ಸುಮಾರು ರೂ. 45 ಲಕ್ಷ ಕೋಟಿ ಮೊತ್ತದ ಅಮೃತಕಾಲದ ಮೊದಲನೆಯ ಆಯವ್ಯಯವನ್ನು ದೇಶಕ್ಕೆ ನೀಡಿರುವುದಕ್ಕಾಗಿ ಅತ್ಯಂತ ಆತ್ಮೀಯವಾಗಿ ಅಭಿನಂದಿಸುತ್ತೇನೆ.


Spread the love