
ದೃಶ್ಯಗಳಿಗೆ ಜೀವ ತುಂಬಿದ ಛಾಯಾಗ್ರಾಹಕ ಮಧುಸೂದನ್
ಮೈಸೂರು: ದೆಹಲಿಯ ವೈಲ್ಡ್ ಲೈಫ್ ಫೋಟೋಗ್ರಾಫಿ ಅಸೋಸಿಯೇಷನ್ ಆಫ್ ಇಂಡಿಯಾ (WPAI)ಹಾಗೂ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾ (PSA)ಸಂಯುಕ್ತ ಆಶ್ರಯದಲ್ಲಿ ನಡೆದ ಇಂಟರ್ನ್ಯಾಷನಲ್ ಡಿಜಿಟಲ್ ಫೋಟೋಗ್ರಫಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೈಸೂರಿನ ಪತ್ರಿಕಾ ಛಾಯಾಗ್ರಾಹಕ ಹಾಗೂ ವನ್ಯಜೀವಿ ಛಾಯಾಗ್ರಾಹಕರಾದ ಎಸ್ ಆರ್ ಮಧುಸೂದನ್ ರವರ ವನ್ಯಜೀವಿ ವಿಭಾಗದಲ್ಲಿ ( spotted deer mating ) ಚಿತ್ರಕ್ಕೆ ಸರ್ಟಿಫಿಕೇಟ್ ಆಫ್ ಮೆರಿಟ್ ಪ್ರಶಸ್ತಿ ದೊರೆತಿದೆ.
ದೇಶದ ವಿವಿಧೆಡೆಯಿಂದ ಸುಮಾರು ಮುನ್ನೂರು ಮಂದಿ ಒಂದು ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದರು. ಈ ಪೈಕಿ ಒಂಬತ್ತು ಮಂದಿ ಅಂತರಾಷ್ಟ್ರೀಯ ಛಾಯಾಗ್ರಾಹಕರು ತೀರ್ಪುಗಾರರಾಗಿ ಭಾಗವಹಿಸಿ, ಸ್ಪರ್ಧೆಗೆ ಬಂದಿದ್ದ ಚಿತ್ರಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಛಾಯಾಗ್ರಾಹಕರಾದ ಎಸ್ ಆರ್ ಮಧುಸೂದನ್ ಅವರ ಚಿತ್ರಗಳು ವಿಭಿನ್ನ ಮತ್ತು ವಿಶಿಷ್ಟವಾಗಿದ್ದು, ತೀರ್ಪುಗಾರರ ಮನಸೆಳೆದಿದೆ.
ಸಾರಂಗಗಳ ಮಿಲನ ಮಹೋತ್ಸವ, ಎತ್ತುಗಳನ್ನು ಕಿಚ್ಚು ಹಾಯಿಸುವ ರೋಚಕ ದೃಶ್ಯ, ಹಕ್ಕಿಗಳೆರಡು ಆಹಾರ ಹಂಚಿಕೊಳ್ಳುತ್ತಿರುವುದು, ಉಪಟಳ ನೀಡುತ್ತಿದ್ದ ಚಿರತೆಯನ್ನು ಅರಣ್ಯಕ್ಕೆ ಬಿಡುವ ವೇಳೆ ಸಿಬ್ಬಂದಿಯನ್ನು ಗುರಾಯಿಸುತ್ತಿರುವ ದೃಶ್ಯಗಳು ನೋಡುಗರ ಮನಮುಟ್ಟುವಂತಿದೆ.
ಹಾಗೂ ಹಾಗೂ ಫೋಟೋ ಜರ್ನಲಿಸಂ ವಿಭಾಗದಲ್ಲಿ ಸ್ವೀಕೃತವಾದ ಛಾಯಾಚಿತ್ರಗಳು. ಈ ಸ್ಪರ್ಧೆಯಲ್ಲಿ ದೇಶದ ವಿವಿಧಡೆಗಳಿಂದ ಸುಮಾರು 300ಕ್ಕೂ ಹೆಚ್ಚು ಮಂದಿ ಸ್ಪರ್ಧಿಸಿರುತ್ತಾರೆ ಹಾಗೂ ಒಂದು ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಯಲ್ಲಿರುತ್ತವೆ 9 ಮಂದಿ ಅಂತರಾಷ್ಟ್ರೀಯ ಛಾಯಾಗ್ರಾಹಕರು ತೀರ್ಪುಗಾರರಾಗಿರುತ್ತಾರೆ