ದೆಹಲಿಯಲ್ಲಿ ಕೊಂಕಣಿ ಅಕಾಡೆಮಿ ರಚನೆ- ಮಾಂಡ್ ಸೊಭಾಣ್ ಅಭಿನಂದನೆ

Spread the love

ದೆಹಲಿಯಲ್ಲಿ ಕೊಂಕಣಿ ಅಕಾಡೆಮಿ ರಚನೆ- ಮಾಂಡ್ ಸೊಭಾಣ್ ಅಭಿನಂದನೆ

ಮಂಗಳೂರು: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೊಂಕಣಿ ಅಕಾಡೆಮಿ ರಚನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿರುವುದಕ್ಕೆ ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಅಭಿನಂದನೆ ಸಲ್ಲಿಸಿದೆ.

ಕೊಂಕಣಿ ಭಾಷೆಯ ಅಭಿವೃದ್ಧಿಗೆ ದೆಹಲಿ ಮುಖ್ಯಮಂತ್ರಿ ಉತ್ತಮ ನಿರ್ಧಾರ ಕೈಗೊಂಡಿದ್ದು ಈ ಮೂಲಕ ದೆಹಲಿಯಲ್ಲಿರುವ ಕೊಂಕಣಿ ಭಾಷಿಕರಿಗೆ ಉಪಯೋಗವಾಗಲಿದೆ ಎಂದು ಸಂಘಟನೆ ತಿಳಿಸಿದೆ.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿ ಸರಕಾರ ಮತ್ತು ಇದಕ್ಕಾಗಿ ದುಡಿದ ದೆಹಲಿಯ ಕೊಂಕಣಿ ಎಸೋಸಿಯೇಶನ್ ಪದಾಧಿಕಾರಿಗಳಿಗೆ ಮಾಂಡ್ ಸೊಭಾಣ್ ಅಭಿನಂದನೆಗಳನ್ನು ಸಲ್ಲಿಸಿದೆ.


Spread the love