ದೇಶದ್ರೋಹ ಕಾನೂನನ್ನು ತಡೆ ಹಿಡಿದ ಸುಪ್ರೀಂ ಕೋರ್ಟ್ ತೀರ್ಮಾನ ಸ್ವಾಗತಾರ್ಹ: ಪಾಪ್ಯುಲರ್ ಫ್ರಂಟ್

Spread the love

ದೇಶದ್ರೋಹ ಕಾನೂನನ್ನು ತಡೆ ಹಿಡಿದ ಸುಪ್ರೀಂ ಕೋರ್ಟ್ ತೀರ್ಮಾನ ಸ್ವಾಗತಾರ್ಹ: ಪಾಪ್ಯುಲರ್ ಫ್ರಂಟ್

ದೇಶದ್ರೋಹ ಕಾನೂನಿನಡಿಯಲ್ಲಿ ಮತ್ತಷ್ಟು ಎಫ್.ಐ.ಆರ್. ದಾಖಲಿಸುವುದನ್ನು ತಡೆದಿರುವ ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‌ಮೆನ್ ಒ.ಎಂ.ಎ. ಸಲಾಂ ಸ್ವಾಗತಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೪-ಂ ಅಥವಾ ದೇಶದ್ರೋಹ ಕಾನೂನು ಒಂದು ವಸಾಹತುಶಾಹಿ ಕಾಲದ ಪಳೆಯುಳಿಕೆಯಾಗಿದ್ದು, ಇದನ್ನು ರಾಜಕೀಯ ಅಸಹಮತಿಗಳನ್ನು ನಿಗ್ರಹಿಸಲು ಸ್ವತಂತ್ರ ಭಾರತದಲ್ಲಿ ಹಲವಾರು ಸರಕಾರಗಳು ವ್ಯಾಪಕವಾಗಿ ದುರ್ಬಳಕೆ ಮಾಡಿವೆ. ಇದು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲು ಪ್ರಮುಖ ಅಸ್ತçವಾಯಿತು. ಆ ಬಳಿಕ ನಾಗರಿಕ ಹಕ್ಕು ಸಂಘಟನೆಗಳು ಮತ್ತು ಜನರ ಸಾಕ್ಷಿಪ್ರಜ್ಞೆಯು ಇದನ್ನು ರದ್ದುಪಡಿಸಬೇಕೆಂದು ದೀರ್ಘ ಸಮಯದಿಂದ ಬೇಡಿಕೆ ಮುಂದಿಡುತ್ತಾ ಬಂದವು. ಸುಪ್ರೀಂ ಕೋರ್ಟ್ ಅಂತಿಮವಾಗಿ ಈ ವಿಚಾರದ ಬಗ್ಗೆ ಗಮನ ಹರಿಸಿರುವುದು ಮತ್ತು ಅಂತಿಮ ಆದೇಶದವರೆಗೆ ಅದನ್ನು ತಡೆಹಿಡಿಯಲು ನಿರ್ಧರಿಸಿರುವುದು ಸಮಾಧಾನಕರ ಸಂಗತಿಯಾಗಿದೆ. ಈ ನಿರ್ಧಾರವು ಈ ಸೆಕ್ಷನ್ ಅಡಿಯಲ್ಲಿ ಬಂಧಿತರಾಗಿರುವ ಹಲವು ಅಮಾಯಕರಿಗೆ ಖಂಡಿತವಾಗಿಯೂ ಒಂದು ಪರಿಹಾರದ ಮೂಲವಾಗಿದೆ. ಇದು ಆ ಅಮಾಯಕರ ಬಿಡುಗಡೆಗೆ ಬಾಗಿಲು ತೆರೆಯಲೂಬಹುದು.
ಕೇಂದ್ರ ಸರ್ಕಾರದ ಪರವಾಗಿ ವ್ಯಕ್ತವಾದ ಆಕ್ಷೇಪಗಳ ನಡುವೆಯೂ ದೇಶದ್ರೋಹ ಕಾನೂನು ತಡೆಹಿಡಿಯುವ ಮಧ್ಯಂತರ ಆದೇಶ ಹೊರಡಿಸಲಾಗಿದೆ. ಈಗ ಹಲವು ವಿರೋಧ ಪಕ್ಷದ ನಾಯಕರೂ ದಮನಕಾರಿ ಕಾನೂನುಗಳ ವಿರುದ್ಧ ಮಾತನಾಡುತ್ತಿರುವುದು ಸ್ವಾಗತಾರ್ಹ. ಆದಾಗ್ಯೂ, ಯುಎಪಿಎಗೆ ಹಲವು ಕಠೋರ ತಿದ್ದುಪಡಿಗಳನ್ನು ಕಾಂಗ್ರೆಸ್ ಪಕ್ಷದ ನೇತೃತ್ವದ ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದವು ಎಂಬುದನ್ನು ಮರೆಯಬಾರದು. ೨೦೧೪ ರಿಂದ, ಬಿಜೆಪಿ ಸರ್ಕಾರದ ಅಡಿಯಲ್ಲಿ ಈ ಕಾನೂನುಗಳ ದುರುಪಯೋಗವು ಆತಂಕಕಾರಿಯಾಗಿ ಹೆಚ್ಚಳ ಕಂಡಿದೆ.

ಈಗ ದೇಶದ್ರೋಹದ ಕಾನೂನನ್ನು ತಡೆಹಿಡಿಯಲಾಗಿದೆ. ಅದಾಗ್ಯೂ, ಅದನ್ನು ಮಾರುವೇಷದಲ್ಲಿ ಮರಳಿ ತರುವ ಪ್ರಯತ್ನಗಳ ವಿರುದ್ಧ ನಾವು ಸದಾ ಎಚ್ಚರದಿಂದ ಇರಬೇಕು. ಪ್ರತಿ ಬಾರಿಯೂ ದೊಡ್ಡಮಟ್ಟದ ಪ್ರತಿಭಟನೆಗಳ ನಂತರ ಕಠಿಣ ಕಾನೂನನ್ನು ಹಿಂಪಡೆದುಕೊಳ್ಳಲಾಗುತ್ತದೆ. ಅದು ಶೀಘ್ರದಲ್ಲೇ ಮತ್ತಷ್ಟು ದಮನಕಾರಿ ನಿಬಂಧನೆಗಳೊAದಿಗೆ ಮತ್ತೊಂದು ಕಾನೂನಿಗೆ ಬದಲಾಯಿಸಲ್ಪಡುತ್ತದೆ ಎಂಬುದು ದೇಶದಲ್ಲಿ ಚಾಲ್ತಿಯಲ್ಲಿರುವ ಸಂಗತಿಯಾಗಿದೆ. ಟಾಡಾವನ್ನು ಪೋಟಾದ ಮೂಲಕ ಹೇಗೆ ಬದಲಾಯಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ನಂತರ ಅದನ್ನು ತಿದ್ದುಪಡಿ ಮಾಡಿ ಯುಎಪಿಎ ರೂಪದಲ್ಲಿ ಮತ್ತೆ ಜೀವಂತಗೊಳಿಸಲಾಯಿತು. ರಾಜದ್ರೋಹದ ಕಾನೂನಿನ ಪ್ರಕರಣದಲ್ಲಿಯೂ, ಸಾಲಿಸಿಟರ್ ಜನರಲ್ ಅವರ ನಿಲುವು ಕಾನೂನನ್ನು ವಿಸ್ತರಿಸುವ ಪರವಾಗಿ ಸರ್ಕಾರದ ಉದ್ದೇಶವನ್ನು ಸೂಚಿಸುತ್ತದೆ.
ನ್ಯಾಯಾಲಯದ ಆದೇಶದ ಸ್ಪೂರ್ತಿಗೆ ವಿರುದ್ಧವಾಗಿ ನಡೆಯುವ ಕುತಂತ್ರಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಪಾಪ್ಯುಲರ್ ಫ್ರಂಟ್ ಚೆಯರ್‌ಮೆನ್ ಜನರಲ್ಲಿ ಮನವಿ ಮಾಡಿದ್ದಾರೆ. ಅದೇ ರೀತಿ ಅಂತಹ ಪ್ರಯತ್ನಗಳನ್ನು ಸೋಲಿಸುವಂತೆ ಅವರು ಸುಪ್ರೀಂ ಕೋರ್ಟ್ಗೂ ಮನವಿ ಮಾಡಿದ್ದಾರೆ.


Spread the love