ದೇಶದ ಜನಸಂಖ್ಯೆ ಸಂಪನ್ಮೂಲವಾಗಿ ಬಳಕೆಯಾಗಬೇಕು – ಯು.ಟಿ.ಖಾದರ್

Spread the love

ದೇಶದ ಜನಸಂಖ್ಯೆ ಸಂಪನ್ಮೂಲವಾಗಿ ಬಳಕೆಯಾಗಬೇಕು – ಯು.ಟಿ.ಖಾದರ್

ಮಂಗಳೂರು: ಜನಸಂಖ್ಯೆ ದೇಶದ ಸಂಪನ್ಮೂಲವಾಗಿ ಪರಿವರ್ತಿಸುವ ಕೆಲಸ ಸರಕಾರದ ಮೇಲಿದೆ.ಚೀನಾ ಜನಸಂಖ್ಯೆಯ ಬಗ್ಗೆ ನಿಲುವು ಬದಲಿಸಿದೆ.ಭಾರತ ಯಂಗ್ ಇಂಡಿಯಾ ಆಗಿರುವುದು ಇಲ್ಲಿನ ಯುವ ಜನರಿಂದ.ಯಾವುದೇ ಕಾನೂನು ಜಾರಿಯಾಗುವ ಮೊದಲು ಸಾರ್ವಜನಿಕ ಚರ್ಚೆಯಾಗಬೇಕು ಎಂದು ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದ.ಕ ಜಿಲ್ಲೆಯ ಮಂಗಳೂರಲ್ಲಿ ಇತ್ತೀಚಿಗೆ ರಾಜ್ಯಮಟ್ಟದ ಬಿಜೆಪಿ ಕಾರ್ಯ ಕಾರಿಣಿ‌ ಸಭೆ ನಡೆಯಿತು.ಆ ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ‌ಬಗ್ಗೆ ಚರ್ಚೆಯಾಗುತ್ತದೆ, ರಾಜ್ಯಕ್ಕೆ ಏನಾದ್ರೂ ಕೊಡುಗೆ ಸಿಗುತ್ತದೆ ಎಂದು ನಾವು ಭಾವಿಸಿದ್ದೆವು. ಈ ಸಭೆಗೆ ಭಾರೀ ಪ್ರಚಾರ ಕೂಡಾ ಕೊಡಲಾಯಿತು. ಆದ್ರೆ ಸಭೆ ಮುಗಿದ ಸಂಜೆ ಮಾತ್ರ ನಾವು ಲವ್ ಜಿಹಾದ್ ತಡೆ ಕಾನೂನು ತರುತ್ತೇವೆ ಎಂದು ತೀರ್ಮಾನ ಎಂದು ಹೇಳಿ ಹೋರಟವರು ಎಲ್ಲಿಗೆ ಹೋದ್ರು ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನೆ ಮಾಡಿದರು. ಈಗ ಯುಪಿ ಯಲ್ಲಿ ಚುನಾವಣೆ ಬರುತ್ತೆ ಎಂದು ಹೊಸ ಸಬ್ಜೆಕ್ಟ್ ಹುಡುಕಿದ್ದಾರೆ. ಆಗ ಸಿಟಿ ರವಿ ಇರಲಿಲ್ವಾ ಎಂದು ಪ್ರಶ್ನೆ ಮಾಡಿದ ಯು.ಟಿ ಖಾದರ್ ದೇಶದ ಕಾನೂನು ಎಲ್ಲರಿಗೆ ಒಂದೇ ಎಂದು ತಿಳಿಸಿದ್ದಾರೆ.

ಸರ್ಕಾರವು ತನ್ನ ಆಡಳಿತ ವೈಫಲ್ಯವನ್ನು ಮರೆಮಾಚಲು ಜನಸಂಖ್ಯೆಯನ್ನು ಟಾರ್ಗೆಟ್ ಮಾಡಿರೋದು ದುರಂತ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.


Spread the love